ನಿಮ್ಮ ಮಾಡ್ಯುಲರ್‌ ಕಿಚನ್‌ ಡಿಜೈನ್‌ಗೆ ಸೈನಿಕ್‌ ಪ್ಲೈವುಡ್‌ ನಿಮಗೆ ಏಕೆ ಬೇಕು ಎಂಬುದಕ್ಕೆ 7 ಕಾರಣಗಳು
Centuryply Blog

Interested in
knowing more?

ನಿಮ್ಮ ಮಾಡ್ಯುಲರ್‌ ಕಿಚನ್‌ ಡಿಜೈನ್‌ಗೆ ಸೈನಿಕ್‌ ಪ್ಲೈವುಡ್‌ ನಿಮಗೆ ಏಕೆ ಬೇಕು ಎಂಬುದಕ್ಕೆ 7 ಕಾರಣಗಳು

ಹೊಸ ಮನೆಯೊಂದರ ಮಾಲೀಕರಾಗಿ, ಮಾಡ್ಯುಲರ್ ಕಿಚನ್ ಅನ್ನು ಮಾಡಿಸಬೇಕೆಂಬ ಬಯಕೆಯನ್ನು ಹೊಂದುವುದು ಸಹಜವಾಗಿರುತ್ತದೆ. ಹಾಗೂ ನಿಮ್ಮ ಅಡುಗೆಮನೆಯ ಒಳಾಂಗಣವನ್ನು ಮರುವಿನ್ಯಾಸಗೊಳಿಸುವ ವಿಷಯಕ್ಕೆ ಬಂದಾಗ, ಮಾಡ್ಯುಲರ್‌ ಕ್ಯಾಬಿನೆಟ್‌ಗಳನ್ನು ಅತ್ಯಂತ ಜಾಣ್ಮೆಯ ಹಾಗೂ ಅತ್ಯಂತ ಸುಂದರವಾದ ಆಯ್ಕೆ ಎಂದು ಸಾಮಾನ್ಯವಾಗಿ ಪರಿಗಣಿಸಲಾಗುತ್ತದೆ. ಹಲವಾರು ಬಣ್ಣಗಳು, ರಚನೆಗಳು ಮತ್ತು ಫಿನಿಷ್‌ಗಳಲ್ಲಿ ಅವು ಬರುತ್ತವೆ ಹಾಗೂ ಪ್ರಾಯೋಗಿಕತೆ ಮತ್ತು ಸುಂದರತೆಯ ನಡುವೆ ಉತ್ತಮ ಸಮತೋಲನವನ್ನು ಸಾಧಿಸುತ್ತವೆ. ಆದಾಗ್ಯೂ, ಲಭ್ಯವಿರುವ ಹಲವಾರು ಸಾಧ್ಯತೆಗಳ ನಡುವಿನಿಂದ ನಿಮ್ಮ ಅಡುಗೆಮನೆಗೆ ಅತ್ಯುತ್ತಮ ಸಾಮಗ್ರಿಗಳನ್ನು ಆಯ್ಕೆ ಮಾಡಲು ಸಾಕಷ್ಟು ಕೆಲಸವನ್ನು ನೀವು ಮಾಡಬೇಕಾಗಬಹುದು.

“ನಿಜವಾದ ವಾಟರ್‌ಪ್ರೂಫ್‌ ಪ್ಲೈ” ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಸೈನಿಕ್‌ ಪ್ಲೈವುಡ್, ನೀವು ವಿಶ್ವಾಸವಿರಿಸಬಹುದಾದ, ಒಂದು ಉತ್ಕೃಷ್ಟವಾದ ಮಿತವ್ಯಯದ ವಾಟರ್‌ಪ್ರೂಫ್‌ ಪ್ಲೈವುಡ್‌ ಆಗಿದೆ. ಪ್ರತಿಯೊಂದು ಸೈನಿಕ್ಪ್ಲೈವುಡ್ ಶೀಟ್‌ ಲಭ್ಯವಿರುವ ಅತ್ಯುತ್ತಮ ಕಚ್ಚಾ ಸಾಮಗ್ರಿಗಳಿಂದ ತಯಾರಿಸಲ್ಪಡುತ್ತದೆ ಹಾಗೂ ಸುಧಾರಿತ ಬಲಕ್ಕಾಗಿ ಹಲವಾರು ಪದರಗಳ ಪ್ಲೈಗಳನ್ನು ಹೊಂದಿದೆ. ಪ್ಲೈವುಡ್‌ ಶೀಟ್‌ನ ಧೃಢತೆಯನ್ನು ಬಲಪಡಿಸಲು ಈ ಪ್ಲೈಗಳು ಅಡ್ಡ-ಬಂಧಕ ಸಂರಚನೆ (ಕ್ರಾಸ್-ಬಾಂಡೆಡ್‌ ಸ್ಟ್ರಕ್ಚರ್)‌ ಯಲ್ಲಿ ಒಟ್ಟಿಗೆ ಅಂಟಿಸಲ್ಪಟ್ಟಿರುತ್ತವೆ.

ವಿಷಯ ಕೋಷ್ಟಕ

➔ ನಿಮ್ಮ ಮಾಡ್ಯುಲರ್‌ ಕಿಚನ್‌ನಲ್ಲಿ ಸೈನಿಕ್‌ ಪ್ಲೈವುಡ್‌ ಅನ್ನು ಬಳಸುವುದರ ಪ್ರಯೋಜನಗಳು

      ◆ ಜಲ ಮತ್ತು ಕುದಿ ನಿರೋಧಕ (bwp ದರ್ಜೆಯ ಪ್ಲೈವುಡ್)

      ◆ ಗೆದ್ದಲು ಮತ್ತು ಕೊರಕ ನಿರೋಧಕ

      ◆ ಎಲ್ಲ ಹವಾಮಾನ ಪರಿಸ್ಥಿತಿಗಳಿಗೆ ಅತ್ಯಂತ ಬಲವಾದ ನಿರೋಧಕತೆ

      ◆ ಅಗತ್ಯಕ್ಕೆ ತಕ್ಕಂತೆ ಪೀಠೋಪಕರಣ ತಯಾರಿಸಿ

      ◆ ಹಲವಾರು ಆಯ್ಕೆಗಳಿಂದ ಆಯ್ದುಕೊಳ್ಳಿ

      ◆ ಸಮಂಜಸ ಬೆಲೆ

      ◆ ವಾರಂಟಿ

➔ ತೀರ್ಮಾನ


ನಿಮ್ಮ ಮಾಡ್ಯುಲರ್‌ ಕಿಚನ್‌ನಲ್ಲಿ ಸೈನಿಕ್‌ ಪ್ಲೈವುಡ್‌ ಅನ್ನು ಬಳಸುವುದರ ಪ್ರಯೋಜನಗಳು

1. ಜಲ ಮತ್ತು ಕುದಿ ನಿರೋಧಕ (bwp ದರ್ಜೆಯ ಪ್ಲೈವುಡ್)

ಭಾರತದಲ್ಲಿ ಮಾರ್ಕೆಟ್‌ ಮಾಡಲ್ಪಡುವ ಬಹುಪಾಲು ಕಿಚನ್‌ ಪ್ಲೈವುಡ್‌ ಸಾಧಾರಣ ಮಟ್ಟದ ವಾಟರ್‌ಪ್ರೂಫಿಂಗ್‌ ಅನ್ನು ಹೊಂದಿರುವ ಅದ್ದಿದ ಪ್ಲೈವುಡ್‌ ಆಗಿರುತ್ತದೆಯಾದಲ್ಲಿ, ಸೆಂಚುರಿಪ್ಲೈನ ಸೈನಿಕ್ಪ್ಲೈವುಡ್ ವೇರಿಯಂಟ್‌ಗಳಾದ ಸೈನಿಕ್‌ 710 ಮತ್ತು ಸೈನಿಕ್ MR‌ ಇವುಗಳು “ನಿಜವಾದ ವಾಟರ್‌ಪ್ರೂಫ್‌ ಪ್ಲೈವುಡ್”‌ ಆಗಿವೆ. ಜಲ-ನಿರೋಧಕವಾಗಿರುವುದಷ್ಟೇ ಅಲ್ಲದೇ, ತಿರುಚದೇ ಅಥವಾ ಸೀಳದೇ ಕುದಿಯು ಬರುವವರೆಗಿನ ತಾಪಮಾನಗಳನ್ನು ಸೈನಿಕ್ಪ್ಲೈವುಡ್ ತಡೆದುಕೊಳ್ಳಬಲ್ಲದು. ಕುದಿಯುವ ನೀರಿನಲ್ಲಿ ಮುಳುಗಿಸಿದ 72-ಗಂಟೆಗಳನ್ನು ತಡೆದುಕೊಳ್ಳುವ ಪ್ಲೈವುಡ್‌ಗಳ ಸಂಖ್ಯೆಯು ಬಹಳ ಹೆಚ್ಚಿಗೆ ಏನಿಲ್ಲವಾದರೂ, ಸೆಂಚುರಿಪ್ಲೈನ ಸೈನಿಕ್‌ 710 ಅವುಗಳಲ್ಲಿ ಒಂದಾಗಿದೆ.​​​​​​​


2. ಗೆದ್ದಲು ಮತ್ತು ಕೊರಕ ನಿರೋಧಕ

ಗೆದ್ದಲುಗಳು ಹಾಗೂ ಕೊರಕಗಳ ವಿರುದ್ಧ ಒಂದು ತಡೆಗೋಡೆಯಾಗಿರುವ GLP (ಗ್ಲ್ಯೂ ಲೈನ್‌ ಪ್ರೊಟೆಕ್ಷನ್)‌ ಅನ್ನು ಸೈನಿಕ್ 710 ಹೊಂದಿದೆ. 5-ವರ್ಷಗಳ ಕೊರಕ ಮತ್ತು ಗೆದ್ದಲು ರಕ್ಷಣಾ ವಾರಂಟಿಯನ್ನೂ ಸಹ ಸೈನಿಕ್‌ MR ಪ್ಲೈವುಡ್‌ ಹೊಂದಿದ್ದು, ನಿಮ್ಮ ಅಡುಗೆಮನೆಯು ಕೀಟಗಳಿಂದ ಸಂರಕ್ಷಿತವಾಗಿ ಇರುವ ಸಮಯವನ್ನು ಹೆಚ್ಚಿಸುತ್ತದೆ. ಅಡುಗೆಮನೆಗಳ ಸೌಂದರ್ಯ ಹಾಗೂ ಬಲವನ್ನು ಇದು ವರ್ಧಿಸುವುದರಿಂದ ಅಡುಗೆಮನೆಗಳಿಗೆ ಇದು ಆದರ್ಶಪ್ರಾಯವಾಗಿದೆ. ನಿಮ್ಮ ಅಡುಗೆಮನೆಯನ್ನು ತಿನ್ನುವ ಕೀಟಗಳ ಬಗ್ಗೆ ದೀರ್ಘ ಸಮಯದವರೆಗೆ ನೀವು ಚಿಂತಿಸಬೇಕಿಲ್ಲದಿರುವುದನ್ನು ಖಚಿತಪಡಿಸಿಕೊಳ್ಳುವಂತೆ 8-ವರ್ಷಗಳ ವಾರಂಟಿಯನ್ನೂ ಸಹ ಸೆಂಚುರಿಪ್ಲೈ ಒದಗಿಸುತ್ತದೆ.​​​​​​​

3. ಎಲ್ಲ ಹವಾಮಾನ ಪರಿಸ್ಥಿತಿಗಳಿಗೆ ಅತ್ಯಂತ ಬಲವಾದ ನಿರೋಧಕತೆ

ಎಲ್ಲ ಹವಾಮಾನ ಪರಿಸ್ಥಿತಿಗಳಿಗೆ ಅಸಾಧಾರಣವಾದ ನಿರೋಧಕತೆಯನ್ನು ಸೈನಿಕ್ಪ್ಲೈವುಡ್ ಹೊಂದಿದೆ. ಲೋಕಲ್‌ ಪ್ಲೈವುಡ್‌ ಅಂತಿಮವಾಗಿ ಸವೆದುಹೋಗುತ್ತದೆ. ಆಗಾಗ್ಗೆ ತೆರೆದು ಮುಚ್ಚಲ್ಪಡುವ ಕಿಚನ್‌ ಕ್ಯಾಬಿನೆಟ್‌ಗಳು, ಅಂತಿಮವಾಗಿ ಪ್ಲೈವುಡ್‌ ಅನ್ನು ಸ್ವಲ್ಪ ಮಟ್ಟಿಗೆ ಬಾಗಿಸಬಹುದು, ಚಕ್ಕೆ ಎಬ್ಬಿಸಬಹುದು, ಅಥವಾ ವಿರೂಪಗೊಳಿಸಬಹುದು. ಅದೊಂದೇ ಕಾರಣಕ್ಕಾಗಿ, ಸೈನಿಕ್‌  710 ದೋಷರಹಿತವಾಗಿದೆ. ಶಾಖ ಮತ್ತು ತೇವಾಂಶದಲ್ಲಿನ ತನ್ನ ಬಾಳಿಕೆಯಿಂದಾಗಿ ಮೂಲ ವಿನ್ಯಾಸವನ್ನು ವರ್ಷಾನುಗಟ್ಟಲೇ ಅದು ಕಾಯ್ದುಕೊಳ್ಳುತ್ತದೆ.

ಕಾಲ ಕಳೆದಂತೆ ಮತ್ತು ಹಾನಿಗೀಡಾಗಿರುವ ಫರ್ನಿಶಿಂಗ್‌ಗಳಿಂದಾಗಿ ನಿಮ್ಮ ಅಡುಗೆಮನೆಯು ತನ್ನ ಸೊಬಗನ್ನು ಶೀಘ್ರವಾಗಿ ಕಳೆದುಕೊಂಡು, ನಿರ್ಜೀವವಾಗಿ ತೋರಬಹುದು. ಸಮಯಾತೀತ ಉತ್ಪನ್ನವು ನಿಮಗೆ ಬೇಕಿದ್ದಲ್ಲಿ, ಶ್ರೇಷ್ಠ ಗುಣಮಟ್ಟದ ಸೈನಿಕ್ಪ್ಲೈವುಡ್ ಅನ್ನು ಆಯ್ಕೆ ಮಾಡಿ.

4. ಅಗತ್ಯಕ್ಕೆ ತಕ್ಕಂತೆ ಪೀಠೋಪಕರಣ ತಯಾರಿಸಿ

ಮನಮೋಹಕವಾದ ಅಡುಗೆಮನೆಯೊಂದನ್ನು ನಿರ್ಮಿಸುವುದು ನೀವಂದುಕೊಂಡದ್ದಕ್ಕಿಂತ ಹೆಚ್ಚು ಸರಳವಾಗಿರುತ್ತದೆ. ಸೈನಿಕ್ಪ್ಲೈವುಡ್ನ ಕೃಪೆಯಿಂದಾಗಿ, ಅಷ್ಟೇನೂ ದುಬಾರಿಯಲ್ಲದ, ಲಾವಣ್ಯದಿಂದ ಕೂಡಿದ ಈ ವಾಟರ್‌ಪ್ರೂಫ್‌ ಪ್ಲೈವುಡ್ ಈಗ ನಿಮ್ಮ ಕೈಗೆಟುಕುತ್ತದೆ. ಈ ಹೈ-ಗ್ರೇಡ್‌ ವಾಟರ್‌ಪ್ರೂಫ್‌ ಕಿಚನ್ಪ್ಲೈವುಡ್ ಅತ್ಯುನ್ನತ ಗುಣಮಟ್ಟದ ಕಚ್ಚಾ ಸಾಮಗ್ರಿಗಳಿಂದ ತಯಾರಿಸಲ್ಪಟ್ಟಿದ್ದು, ಹೆಚ್ಚು ತೇವಾಂಶ ಮತ್ತು ನೀರನ್ನು ಹೊಂದಿರುವ ಅಡುಗೆಮನೆಯಂಥ ಸ್ಥಳಗಳಿಗೆ ಒಂದು ಉತ್ಕೃಷ್ಟವಾದ ಆಯ್ಕೆಯಾಗಿದೆ. ಅದರ ಪರಿಣಾಮವಾಗಿ, ನಿಮ್ಮ ಅಭಿರುಚಿಯನ್ನು ವ್ಯಕ್ತಪಡಿಸುವ ಮಾಡ್ಯುಲರ್‌ ಕಿಚನ್‌ಗಾಗಿ ನಿಜವಾದ ವಾಟರ್‌ಪ್ರೂಫ್‌ ಪ್ಲೈವುಡ್‌ ಅನ್ನು ನೀವು ಬಳಸಬಹುದು.

ನಿಮಗೆ ಬಾಳಿಕೆ ಬರುವ ವರ್ಕ್‌ ಸರ್ಫೇಸ್‌ ಬೇಕಿರಲಿ, ನಯ-ನುಣುಪಿನ ಕಪ್‌ಬೋರ್ಡ್‌ಗಳು, ಅಥವಾ ಪ್ರಾಯೋಗಿಕವಾದ ಸ್ಟೋರೇಜ್‌ ಡ್ರಾಯರ್‌ಗಳು ಬೇಕಿರಲಿ, ಸೈನಿಕ್‌ ಪ್ಲೈವುಡ್‌ ನಿಮ್ಮ ನೆರವಿಗೆ ಬರುತ್ತದೆ.

5. ಹಲವಾರು ಆಯ್ಕೆಗಳಿಂದ ಆಯ್ದುಕೊಳ್ಳಿ

ಬೇರೆಬೇರೆ ವ್ಯಕ್ತಿಗಳ ವಿನ್ಯಾಸ ಅಗತ್ಯತೆಗಳು ವಿವರಿಸಬಹುದಾದ ಕಾರಣಗಳಿಗಾಗಿ ಬೇರೆಬೇರೆ ಆಗಿರಬಹುದು. ನಿಮ್ಮ ಎಲ್ಲ ಬಯಕೆಗಳು ಹಾಗೂ ಆಸೆಗಳನ್ನು ಈಡೇರಿಸಲು ಸೈನಿಕ್ಪ್ಲೈವುಡ್ಗಳು ಬೇರೆಬೇರೆ ದಪ್ಪದಲ್ಲಿ ಲಭ್ಯವಾಗುತ್ತವೆ. 4 ಮಿಮೀ, 6 ಮಿಮೀ, 9 ಮಿಮೀ, 12 ಮಿಮೀ, 16 ಮಿಮೀ, ಮತ್ತು 19 ಮಿಮೀ ಹೀಗೆ ಹಲವಾರು ಆಯ್ಕೆಗಳಲ್ಲಿ ನಿಮಗೆ ಸೂಕ್ತವಾದುದನ್ನು ಆಯ್ದುಕೊಳ್ಳಬಹುದು. 7 x 3 ಅಡಿ ಮತ್ತು 8 x 4 ಅಡಿ ಸೇರಿದಂತೆ ಹಲವಾರು ಗಾತ್ರಗಳಲ್ಲಿ ಸಹ ಸೈನಿಕ್ 710 ಲಭ್ಯವಿದೆ. ಯಾವುದನ್ನೇ ನೀವು ನಿರ್ಧರಿಸಿ, ನಿಮ್ಮ ಪ್ಲೈವುಡ್‌ ಹಲಗೆಗಳು ತಿರುಚದಿರುವುದನ್ನು ಅಥವಾ ಬಾಗದಿರುವುದನ್ನು ಸೈನಿಕ್ಪ್ಲೈವುಡ್ ಖಚಿತಪಡಿಸುತ್ತದೆ.​​​​​​​

6. ಸಮಂಜಸವಾದ ಬೆಲೆ

ಪ್ರಾಯೋಗಿಕವಾಗಿರುವ, ಸುಂದರವಾದ ಹಾಗೂ ಮಿತವ್ಯಯಕಾರಿಯೂ ಸಹ ಆಗಿರುವ ವಿನ್ಯಾಸಗಳನ್ನು ಹುಡುಕುವುದು ಸುಲಭದ ಕೆಲಸವೇನೂ ಆಗಿರಲಿಕ್ಕಿಲ್ಲ. ಆದರೂ, ಆ ಸಮಯವು ಗತಿಸಿ ಹೋಗಿದೆ, ಈಗ ಹಾಗೇನೂ ಇಲ್ಲ. ಸೈನಿಕ್ 710 ಮತ್ತು ಸೈನಿಕ್ MR ಪ್ಲೈವುಡ್‌ಗಳು ಉನ್ನತ-ಗುಣಮಟ್ಟದ ಕಟ್ಟಿಗೆಯಿಂದ ತಯಾರಿಸಲ್ಪಟ್ಟಿದ್ದು, ಭಾರತದಾದ್ಯಂತ ಸಮಾನ‌ ಬೆಲೆಗಳನ್ನು ಹೊಂದಿವೆ. ಸೆಂಚುರಿಪ್ಲೈ ಸೈನಿಕ್‌ 710 ಇದರ ಬೆಲೆಯು ಪ್ರತಿ ಯೂನಿಟ್ಟಿಗೆ ರೂ.105 ಗಳಾಗಿದೆ (1 ಯೂನಿಟ್‌ = 929 ಚ.ಸೆಂಮೀ., GST ಒಳಗೊಂಡು). ಆದ್ದರಿಂದ, ವಿಶ್ವಾಸಯೋಗ್ಯ, ಕೈಗೆಟುಕುವ ಬೆಲೆಯ ವಾಟರ್‌ಪ್ರೂಫ್‌ ಪ್ಲೈವುಡ್‌ಗಾಗಿನ ನಿಮ್ಮ ಹುಡುಕಾಟವು ಇಲ್ಲಿಗೆ ಮುಗಿಯುತ್ತದೆ. ಕಡಿಮೆ ಬೆಲೆಯಲ್ಲಿ ಉನ್ನತ-ಗುಣಮಟ್ಟದ ಕಿಚನ್‌ ಇಂಟೀರಿಯರ್‌ಗಳನ್ನು ಒದಗಿಸುವುದು ಸೈನಿಕ್ಪ್ಲೈವುಡ್ನ ಗುರಿಯಾಗಿದೆ.  ​​​​​​​

ಹೈಯೆಸ್ಟ್‌-ಗ್ರೇಡ್‌ ಪ್ಲೈವುಡ್‌ ಅನ್ನು ನೀವು ಆಯ್ಕೆ ಮಾಡಿದಲ್ಲಿ, ನಿಮ್ಮ ಕನಸಿನ ಅಡುಗೆಮನೆಯನ್ನು ನಿರ್ಮಿಸಲು ಒಂದು-ಬಾರಿಯ ಹೂಡಿಕೆಯನ್ನು ನೀವು ಮಾಡುತ್ತೀರಿ. ಸೂಕ್ತ ಜಲ-ನಿರೋಧಕ ತಾಂತ್ರಿಕತೆಗಳನ್ನು ಹೊಂದಿರುವ ಪ್ಲೈವುಡ್‌ ಅನ್ನು ಬಳಸುವಿಕೆಯು ಬಾಳಿಕೆ ಬರುವಂಥದ್ದು ಹಾಗೂ ಮಿತವ್ಯಯಕರವಾದದ್ದು, ಎರಡೂ ಆಗಿದೆ.​​​​​​​

7. ವಾರಂಟಿ

ಸೈನಿಕ್ 710 ಪ್ಲೈವುಡ್‌ನ ಉನ್ನತ-ವರ್ಗದ ಗುಣಮಟ್ಟ ಹಾಗೂ ಕುದಿ ನಿರೋಧಕತೆಯಿಂದಾಗಿ ಅವಲಂಬನೀಯ ಹಾಗೂ ಸುಸ್ಥಿರವಾಗಿರುವಂತೆ ಅದು ಅಭಿವೃದ್ಧಿಪಡಿಸಲ್ಪಟ್ಟಿದೆ. ಈ ವ್ಯವಹಾರದ ಅತ್ಯಂತ ದೀರ್ಘಕಾಲಿಕ ಭರವಸೆಯಾದ, ಅಗಾಧ 8-ವರ್ಷಗಳ ವಾರಂಟಿಯ ಬೆಂಬಲವನ್ನು ಸೆಂಚುರಿಪ್ಲೈನ ಸೈನಿಕ್‌ 710 ಪ್ಲೈವುಡ್‌ ಹೊಂದಿದೆ. ನಿಮ್ಮ ಪೀಠೋಪಕರಣದ ಧೃಢತೆ ಹಾಗೂ ಬಳಕೆಯ ಖಾತರಿಯನ್ನು ನೀಡುವ ಗುರಿಯನ್ನು ಸೆಂಚುರಿಪ್ಲೈ ಹೊಂದಿದೆ. ಅದೇ ಮತ್ತೊಂದೆಡೆಗೆ, ಒಳಾಂಗಣ ಮತ್ತು ಹೊರಾಂಗಣದ ಎಲ್ಲ ಅಂಶಗಳನ್ನು ಒಳಗೊಳ್ಳುವ ಸೈನಿಕ್‌ MR ಐದು-ವರ್ಷಗಳ ವಾರಂಟಿಯನ್ನು ಹೊಂದಿದೆ.​​​​​​​

8. ತೀರ್ಮಾನ​​​​​​​

ಹೆಚ್ಚು ತೇವಾಂಶಯುಕ್ತ ಪರಿಸರಗಳಲ್ಲಿ ಬಳಸುವುದಕ್ಕಾಗಿ BWP-ದರ್ಜೆಯ ಸೈನಿಕ್‌ 710 ಮತ್ತು MR ಎರಡೂ ಪ್ಲೈವುಡ್‌ಗಳು ಸೂಕ್ತವಾಗಿವೆ. ಆದ್ದರಿಂದ, ವಿಶ್ವಾಸಾರ್ಹವಾದ ಹಾಗೂ ಧೃಢವಾದ ಕಿಚನ್ಪ್ಲೈವುಡ್ಗಾಗಿ ಇದು ಅತ್ಯುತ್ತಮವಾದ ಆಯ್ಕೆಯಾಗಿದೆ. ನೀರು ಹಾಗೂ ಗೆದ್ದಲುಗಳನ್ನು ನಿರೋಧಿಸುವ ಅದರ ಸಾಮರ್ಥ್ಯವು ನಿಮ್ಮ ಸುಂದರವಾದ ಮಾಡ್ಯುಲರ್‌ ಕಿಚನ್‌ನ ವಾಟರ್‌ಪ್ರೂಫಿಂಗ್‌ಗೆ ಅದನ್ನು ಆದರ್ಶಪ್ರಾಯವಾದ ಆಯ್ಕೆಯನ್ನಾಗಿಸುತ್ತದೆ.

ಅದರ ವಿಶಿಷ್ಟವಾದ ಉತ್ಪಾದನಾ ವಿಧಾನದಿಂದಾಗಿ, ಇತರ ವರೈಟಿಗಳಿಗಿಂತ ಈ ಪ್ಲೈವುಡ್‌ ಹೆಚ್ಚು ಗಟ್ಟಿಮುಟ್ಟಾಗಿದ್ದು, ದೀರ್ಘ ಜೀವಿತಾವಧಿಯನ್ನು ಖಚಿತಪಡಿಸುತ್ತದೆ. ಸೆಂಚುರಿಪ್ಲೈನ ಸೈನಿಕ್ಪ್ಲೈವುಡ್ ಲಭ್ಯವಿರುವ ಅತ್ಯಂತ ಕಡಿಮೆ-ದುಬಾರಿಯಾದ ಆಯ್ಕೆಗಳಲ್ಲಿ ಒಂದಾಗಿದ್ದು, ಕಟ್ಟುನಿಟ್ಟಿನ ಬಜೆಟ್‌ ಅನ್ನು ಹೊಂದಿರುವವರಿಗೆ ಒಂದು ಅದ್ಭುತವಾದ ಆಯ್ಕೆಯಾಗಿದೆ.


Enquire Now

Add your comments

Voice Search

Speak Now

Voice Search
Web Speech API Demonstration

Click on the microphone icon and begin speaking.

Speak now.

No speech was detected. You may need to adjust your microphone settings.

Click the "Allow" button above to enable your microphone.

Permission to use microphone was denied.

Permission to use microphone is blocked. To change, go to chrome://settings/contentExceptions#media-stream

Web Speech API is not supported by this browser. Upgrade to Chrome version 25 or later.

Press Control-C to copy text.
(Command-C on Mac.)
Text sent to default email application.
(See chrome://settings/handlers to change.)