ಫೈರ್‌ವಾಲ್ ಅಪಘಾತ ತಡೆಗಟ್ಟುವಿಕೆಯತ್ತ ಒಂದು ಹೆಜ್ಜೆಯಾಗಿದೆ
Centuryply Blog

Interested in
knowing more?

ಫೈರ್‌ವಾಲ್ ಅಪಘಾತ ತಡೆಗಟ್ಟುವಿಕೆಯತ್ತ ಒಂದು ಹೆಜ್ಜೆಯಾಗಿದೆ

ವ್ಯಾಖ್ಯಾನದ ಪ್ರಕಾರ ಅಪಘಾತಗಳೆಂದರೆ ಅನಿರೀಕ್ಷಿತ ಘಟನೆಗಳಾಗಿದ್ದು ಅವುಗಳ ಮೇಲೆ ನಮಗೆ ಯಾವುದೇ ನಿಯಂತ್ರಣವಿರುವುದಿಲ್ಲ, ಅವು ಸಂಭವಿಸುತ್ತವೆ ಮತ್ತು ಅವುಗಳಿಂದ ಉಂಟಾಗುವ ಗೊಂದಲ-ಅವ್ಯವಸ್ಥೆಗಳನ್ನು ನಾವು ನಿರ್ವಹಿಸುವಂತೆ ಮಾಡುತ್ತವೆ. ಈ ಅನಿರೀಕ್ಷಿತ ಘಟನೆಗಳ ಅಂತಹ ಒಂದು ಉದಾಹರಣೆಯೆಂದರೆ, ಬೆಂಕಿಯ ಅನಾಹುತವಾಗಿದ್ದು, 2019 ನೇ ಇಸವಿಯಲ್ಲಿ  11,000 ಕ್ಕಿಂತ ಹೆಚ್ಚು ಬೆಂಕಿಯ ಅಪಘಾತಗಳ ಪ್ರಕರಣಗಳು ವರದಿಯಾಗಿದ್ದವು ಮತ್ತು ಇದು ದೇಶದಾದ್ಯಂತ 10 ಸಾವಿರಕ್ಕಿಂತ ಹೆಚ್ಚು ಸಾವುಗಳಿಗೆ ಕಾರಣವಾಯಿತು. ನಂತರದ ವರ್ಷಗಳಲ್ಲಿ ವರದಿಯಾದ ಅಪಘಾತಗಳ ಸಂಖ್ಯೆಯು ಕಡಿಮೆಯಾಗುತ್ತಿದೆಯಾದರೂ, ಈ ಸಂಖ್ಯೆಗಳು ಇನ್ನೂ  ಆತಂಕಕಾರಿ ಪ್ರಮಾಣದಲ್ಲಿ ಅಧಿಕವಾಗಿವೆ ಮತ್ತು ಈ ವಿಷಯದಲ್ಲಿ ನಾವೆಲ್ಲರೂ ಇನ್ನಷ್ಟು ಎಚ್ಚರಿಕೆ ವಹಿಸಬೇಕು. ಅಗ್ನಿ ಸುರಕ್ಷೆಯಲ್ಲಿ ಹೂಡಿಕೆ ಮಾಡುವುದು ಬಹಳ ನಿರ್ಣಾಯಕ ಚಟುವಟಿಕೆಯಾಗಿದ್ದು ನಾವೆಲ್ಲರೂ ಅದನ್ನು ರೂಢಿಸಿಕೊಳ್ಳಬೇಕು, ಇದರಿಂದ ಬೆಂಕಿಯ ದುರದೃಷ್ಟಕರ ಅನಾಹುತದಲ್ಲಿ ಉಂಟಾಗುವ ಮನುಷ್ಯ ಹಾಗೂ ವಸ್ತುಗಳ ನಷ್ಟವನ್ನು ಕಡಿಮೆಮಾಡಬಹುದು.

ನಮ್ಮ ವಾಸಸ್ಥಳಗಳನ್ನು ಪರಿಗಣಿಸುವಾಗ, ತಂತ್ರಜ್ಞಾನದಲ್ಲಿನ ನಿರಂತರ ಆವಿಷ್ಕಾರಗಳಿಂದಾಗಿ ನಾವು ಈಗ ಅಗ್ನಿ ನಿರೋಧಕ ಪ್ಲೈವುಡ್ ಅನ್ನು ಹೊಂದಿದ್ದೇವೆ. ಪ್ಲೈವುಡ್ ಉದ್ಯಮದಲ್ಲಿನ ಪ್ರಮುಖ ಹೆಸರುಗಳಲ್ಲಿ ಒಂದಾಗಿರುವ ಸೆಂಚುರಿಪ್ಲೈ, ಅಗ್ನಿ ನಿರೋಧಕ ಪ್ಲೈವುಡ್‌ನ ಆಯ್ದ ಶ್ರೇಣಿಯನ್ನು ಹೊಂದಿದೆ ಮತ್ತು ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ಇತರ ಅಗ್ನಿ ನಿರೋಧಕ ಪ್ಲೈವುಡ್‌ಗಳನ್ನು ಇದು ಮೀರಿಸುತ್ತದೆ. ಈ ಅಗ್ನಿ ನಿರೋಧಕ ಪ್ಲೈವುಡ್ ಕ್ರಾಂತಿಕಾರಕ ಫೈರ್‌ವಾಲ್ ತಂತ್ರಜ್ಞಾನದಿಂದ ಪುಷ್ಟೀಕರಿಸಲ್ಪಟ್ಟಿದ್ದು, ಇದು ಪ್ಲೈವುಡ್‌ಗಳಿಗೆ ಅತ್ಯುತ್ತಮ ದರ್ಜೆಯ ಅಗ್ನಿಶಾಮಕ ಗುಣಲಕ್ಷಣಗಳನ್ನು ನೀಡುತ್ತದೆ. ಫೈರ್‌ವಾಲ್ ತಂತ್ರಜ್ಞಾನವು ಮೂಲತಃ ದೇಶೀಯವಾಗಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನವಾಗಿದ್ದು, ಒಂದು ಪ್ಲೈವುಡ್‌ನ ಪಾಲಿಮರ್ ಮ್ಯಾಟ್ರಿಕ್ಸ್‌ನಲ್ಲಿ ಕೂರಿಸಲಾದ ನ್ಯಾನೊ ಎಂಜಿನಿಯರ್ಡ್ ಕಣಗಳ ಬಳಕೆಯನ್ನು ಒಳಗೊಂಡಿರುತ್ತದೆ, ಇದು ಬೆಂಕಿಯ ಹರಡುವಿಕೆಯನ್ನು ತಡೆಗಟ್ಟುವ ಸಾಮರ್ಥ್ಯವನ್ನು ಪ್ಲೈವುಡ್‌ಗೆ ನೀಡುತ್ತದೆ ಮತ್ತು ಅದನ್ನು ನಂದಿಸುವುದರಲ್ಲಿ ಸಹ ನೆರವು ನೀಡುತ್ತದೆ.

ಫೈರ್‌ವಾಲ್ ತಂತ್ರಜ್ಞಾನವನ್ನು ಸ್ಮೋಕ್-ಡೆವಲಪ್ಡ್ ಇಂಡೆಕ್ಸ್, ದಹನಶೀಲತೆ ಇನ್ನು ಮುಂತಾದ ವಿವಿಧ ರೀತಿಯ ನಿರ್ಣಾಯಕ ಮಾನದಂಡಗಳಿಗಾಗಿ ಪರೀಕ್ಷಿಸಲಾಗಿದೆ. ಇಂಡಿಯನ್ ಸ್ಟ್ಯಾಂಡರ್ಡ್ಸ್ IS 5509, ಅಮೆರಿಕನ್ ಸ್ಟ್ಯಾಂಡರ್ಡ್ಸ್ ASTM E84 ಹಾಗೂ ಬ್ರಿಟಿಷ್ ಸ್ಟ್ಯಾಂಡರ್ಡ್ಸ್ BS 476 ನಿಂದ ನಿರ್ದಿಷ್ಟಪಡಿಸಲಾದ ಮಾನದಂಡಕ್ಕೆ ಪ್ರಮಾಣಿತ ಪರೀಕ್ಷಾ ಪರಿಸ್ಥಿತಿಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ತದ್ರೀತಿಯ ಪ್ಲೈವುಡ್‌ಗಳಿಗೆ ಹೋಲಿಸಿದರೆಈ ತಂತ್ರಜ್ಞಾನದಿಂದ ಸಮೃದ್ಧವಾಗಿರುವ ಪ್ಲೈವುಡ್ ಹೆಚ್ಚು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

ಫೈರ್‌ವಾಲ್ ತಂತ್ರಜ್ಞಾನದಿಂದ ಪುಷ್ಟೀಕರಿಸಲ್ಪಟ್ಟ ಸೆಂಚುರಿಪ್ಲೈನ ಅಗ್ನಿ ನಿರೋಧಕ ಪ್ಲೈವುಡ್‌ ಕೆಲವು ಗಮನಾರ್ಹ ವೈಶಿಷ್ಟ್ಯಗಳು ಕೆಳಗಿನಂತಿವೆ:

ಕಡಿಮೆ ಹಬ್ಬುವಿಕೆ ಮಟ್ಟ:

ಇತರ ಪ್ಲೈವುಡ್‌ಗಳಿಗಿಂತ ಭಿನ್ನವಾಗಿ, ಫೈರ್‌ವಾಲ್ ತಂತ್ರಜ್ಞಾನದಿಂದ ಸಮೃದ್ಧವಾಗಿರುವ ಪ್ಲೈವುಡ್‌ಗಳು ಬೆಂಕಿಯ ಹಬ್ಬುವಿಕೆಯನ್ನು ವಿಳಂಬಗೊಳಿಸುತ್ತವೆ ಮತ್ತು ಬೆಂಕಿಯು ತೀವ್ರಗತಿಯಲ್ಲಿ ಹಬ್ಬಲು ಒಂದು ಮಾಧ್ಯಮವಾಗಿ ಕಾರ್ಯನಡಿಸುವುದಿಲ್ಲ. ವಾಸ್ತವದಲ್ಲಿ, ಈ ಪ್ಲೈವುಡ್ ಎಷ್ಟರ ಮಟ್ಟಿಗೆ ಕ್ರಾಂತಿಕಾರಕವಾಗಿದೆಯೆಂದರೆ, ಬೆಂಕಿಯ ಅನಾಹುತದ ಮೂಲವನ್ನು ತೆಗೆದುಹಾಕಿದ ಕೂಡಲೆ ಇವು ಬೆಂಕಿಯನ್ನು ನಂದಿಸುವುದರಲ್ಲಿ ಸಹ ನೆರವು ನೀಡುತ್ತವೆ. ಆದ್ದರಿಂದ ಜನರು ಆರಾಮವಾಗಿ ಕಟ್ಟಡದಿಂದ ನಿರ್ಗಮಿಸಬಹುದು ಮತ್ತು ಸಹಾಯಕ್ಕಾಗಿ ಅಗ್ನಿಶಾಮಕ ಇಲಾಖೆಗೆ ಕರೆ ಮಾಡಬಹುದು.

ಕಡಿಮೆ ಹೊಗೆ ಹೊರಸೂಸುವಿಕೆ:

ಬೆಂಕಿಯ ದುರದೃಷ್ಟಕರ ಅನಾಹುತ ಸಂಭವಿಸಿದಾಗ ಅಧಿಕ ಪ್ರಮಾಣದ ವಿಷಕಾರಿ ಹೊಗೆಯು ಉತ್ಪತ್ತಿಯಾಗುತ್ತದೆ ಮತ್ತು ಇದು ಉಸಿರುಗಟ್ಟುವಿಕೆಯನ್ನು ಉಂಟುಮಾಡಬಹುದು ಹಾಗೂ ದೀರ್ಘಸಮಯದ ವರೆಗೆ ಇದಕ್ಕೆ ಒಡ್ಡಿಕೊಂಡರೆ ಮಾರಣಾಂತಿಕವಾಗಿಯೂ ಪರಿಣಮಿಸಬಹುದು. ಆದರೆ ಸಾಮಾನ್ಯ ಪ್ಲೈವುಡ್‌ಗೆ ಹೋಲಿಸಿದರೆ ಫೈರ್‌ವಾಲ್ ತಂತ್ರಜ್ಞಾನವಿರುವ ಪ್ರೈವುಡ್‌ನಲ್ಲಿ ಹೊಗೆ ಹೊರಸೂಸುವ ಪ್ರಮಾಣವು ಗಮನಾರ್ಹವಾಗಿ ಕಡಿಮೆಯಾಗಿದೆ, ಆದ್ದರಿಂದ ಬೆಂಕಿಯ ಮೂಲವನ್ನು ನಂದಿಸಲು ಮತ್ತು ಕಟ್ಟಡದಿಂದ ಸುರಕ್ಷಿತವಾಗಿ ನಿರ್ಗಮಿಸಲು ಸಾಕಷ್ಟು ಸಮಯಾವಕಾಶವನ್ನು ನೀಡುತ್ತದೆ.

ಬೆಂಕಿ ಒಳತೂರುವ (ಪೆನಟ್ರೇಷನ್) ದರ ಸಹ ಕಡಿಮೆ:

ಫೈರ್‌ವಾಲ್ ತಂತ್ರಜ್ಞಾನದಿಂದ ಪುಷ್ಟೀಕರಿಸಲಾದ 19mm ದಪ್ಪದ ಪ್ಲೈವುಡ್‌ಗೆ ಬೆಂಕಿ ಒಳತೂರಲು ಸುಮಾರು 50 ನಿಮಿಷಗಳು ಹಿಡಿಯುತ್ತವೆ. ಈ ಪ್ಲೈವುಡ್ ಅನ್ನು ಪರೀಕ್ಷಿಸಿದಾಗ ಅದು ನಿಮಿಷಗಳಲ್ಲಿ ಪ್ಲೈವುಡ್‌ನ ದಪ್ಪಕ್ಕಿಂತ 3 ಪಟ್ಟಿಗಿಂತ ಹೆಚ್ಚು ಜ್ವಾಲೆಯು ಒಳತೂರುವ (ಪೆನಟ್ರೇಷನ್) ದರವನ್ನು ಹೊಂದಿತ್ತು, ಆದ್ದರಿಂದ ಇದು ಬೆಂಕಿಯ ಮೂಲವನ್ನು ಕಂಡುಹಿಡಿಯಲು ಮತ್ತು ಹೆಚ್ಚಿನ ನಷ್ಟಕ್ಕೆ ಕಾರಣವಾಗುವ ಮೊದಲೇ ಅದನ್ನು ನಂದಿಸಲು ಸಾಕಷ್ಟು ಸಮಯವನ್ನು ನೀಡುತ್ತದೆ.

ಕೊರಕ ಕೀಟ ಮತ್ತು ಗೆದ್ದಲು ನಿರೋಧಕ:

ಪ್ಲೈವುಡ್‌ಗಳು ಅಗ್ನಿ ನಿರೋಧಕ ಮಾತ್ರವಲ್ಲದೆ ಕೊರಕ ಕೀಟ ಮತ್ತು ಗೆದ್ದಲು ನಿರೋಧಕವೂ ಆಗಿವೆ. ವಿಶೇಷವಾದ ಗ್ಲೂ ಲೈನ್ ಪ್ರೊಟೆಕ್ಷನ್‌ನೊಂದಿಗೆ ತಯಾರಿಸಲ್ಪಟ್ಟಿರುವ ಇವು ಕೀಟಗಳನ್ನು ಪ್ರತಿರೋಧಿಸುತ್ತವೆ ಮಾತ್ರವಲ್ಲ ಅವುಗಳನ್ನು ಸಂಪೂರ್ಣವಾಗಿ ನಾಶಪಡಿಸುತ್ತವೆ. ಹೀಗಾಗಿ ನಿಮ್ಮ ಇಂಟೀರಿಯರ್‌ಗಳ ನೈರ್ಮಲ್ಯದ ಬಗ್ಗೆ ನೀವು ಒತ್ತಡ ಮುಕ್ತರಾಗಿರುವಂತೆ ಮಾಡುತ್ತವೆ.

ಆದ್ದರಿಂದ ಮುನ್ನೆಜ್ಜೆ ಇಡಿ ಮತ್ತು ಅಗ್ನಿ ಸುರಕ್ಷೆಯ ಕಡೆಗೆ ನಿರ್ಣಾಯಕ ಹೆಜ್ಜೆಯನ್ನು ತೆಗೆದುಕೊಳ್ಳಿ ಮತ್ತು ಅಸಾಧಾರಣವಾದ ಫೈರ್‌ವಾಲ್ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡಿ. ಇಲ್ಲಿ ಸೆಂಚುರಿಪ್ಲೈ ನೀಡುವ ವಿವಿಧ ಅಗ್ನಿ ನಿರೋಧಕ ಪ್ಲೈವುಡ್ ಬಗ್ಗೆ ಇನ್ನಷ್ಟು ವಿಷಯಗಳನ್ನು ತಿಳಿದುಕೊಳ್ಳಿ: https://www.centuryply.com/firewall-technology/kannada

 

Enquire Now

Add your comments

Voice Search

Speak Now

Voice Search
Web Speech API Demonstration

Click on the microphone icon and begin speaking.

Speak now.

No speech was detected. You may need to adjust your microphone settings.

Click the "Allow" button above to enable your microphone.

Permission to use microphone was denied.

Permission to use microphone is blocked. To change, go to chrome://settings/contentExceptions#media-stream

Web Speech API is not supported by this browser. Upgrade to Chrome version 25 or later.

Press Control-C to copy text.
(Command-C on Mac.)
Text sent to default email application.
(See chrome://settings/handlers to change.)