Consumer

ಪ್ರತಿಸ್ಪರ್ಧಿ ಉತ್ಪನ್ನಕ್ಕಿಂತ ನಮ್ಮ ಪ್ಲೈವುಡ್‌ ಅನ್ನು ಉತ್ತಮವಾಗಿಸುವ QR ಕೋಡ್

ಪ್ಲೈವುಡ್‌, ಇದು ಅತ್ಯಂತ ಜನಪ್ರಿಯವಾದ ನಿರ್ಮಾಣ ಸಾಮಗ್ರಿಗಳಲ್ಲಿ ಒಂದಾಗಿದೆ. ಫೈರ್-ರೆಸಿಸ್ಟಂಟ್‌ ಮತ್ತು ಆ್ಯಂಟಿವೈರಲ್‌ ಗುಣಲಕ್ಷಣಗಳಂಥ ಹೆಚ್ಚುವರಿ ವೈಶಿಷ್ಟ್ಯತೆಗಳನ್ನೂ ಸಹ ಇದು ಹೊಂದಿದೆ. ಅದಕ್ಕಿಂತಲೂ ಹೆಚ್ಚಾಗಿ, ಅದು ತಾಳಿಕೆ ಬರುತ್ತದೆ ಮತ್ತು ಕೈಗೆಟುಕುವ ಬೆಲೆಯಲ್ಲಿ ದೊರೆಯುತ್ತದೆ. ಅದರ ಜನಪ್ರಿಯತೆ ಮತ್ತು ವ್ಯಾಪಕ ಬಳಕೆಯಿಂದಾಗಿ, ಅನೇಕ ನಕಲಿ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಮಾರಾಟ ಮಾಡಲ್ಪಡುತ್ತಿವೆ. ಆದ್ದರಿಂದ, ಗ್ರಾಹಕರು ವಂಚನೆಗೊಳಗಾಗುತ್ತಿದ್ದಾರೆ. ಪ್ರತಿಷ್ಠಿತ ಬ್ರ್ಯಾಂಡ್‌ ಒಂದರ ಅಸಲಿ ಉತ್ಪನ್ನ ಎಂದು ಯಾವುದನ್ನು ಅವರು ನಂಬುತ್ತಾರೋ ಅದು ಕಡಿಮೆ ಗುಣಮಟ್ಟದ ಪ್ಲೈವುಡ್‌ ಆಗಿರುತ್ತದೆ.

ಇದಕ್ಕಾಗಿ ಪರಿಹಾರವನ್ನು ತರುವುದರಲ್ಲಿ ಭಾರತದಲ್ಲಿ ಪ್ಲೈವುಡ್‌ ಮಾರುಕಟ್ಟೆಯಲ್ಲಿ ಸೆಂಚುರಿಪ್ಲೈ ಮೊದಲನೇಯದ್ದಾಗಿದೆ. ಈ ಪ್ಲೈವುಡ್‌ ಕಂಪನಿಯು ತನ್ನ ಎ-ಗ್ರೇಡ್‌ ಪ್ಲೈವುಡ್‌ಗೆ ಹೆಸರುವಾಸಿಯಾಗಿದೆ. ಆದ್ದರಿಂದ, ನಕಲಿ ಪ್ಲೈವುಡ್‌ ವರದಿ ಮಾಡಲ್ಪಟ್ಟಾಗ, ನಾವೀನ್ಯಪೂರ್ಣವಾದ ಪರಿಹಾರವನ್ನು ಅದು ಹೊರತಂದಿತು. ಆದ್ದರಿಂದ, ದೇಶದಲ್ಲಿ ಸೆಂಚುರಿ ಪ್ರಾಮಿಸ್ ‌ ಆ್ಯಪ್ ಅನ್ನು ಅದು ಪರಿಚಯಿಸಿತು.

ಪರಿಹಾರೋಪಾಯ

ಮಾರುಕಟ್ಟೆಯಲ್ಲಿ ಖೊಟ್ಟಿ ಮತ್ತು ನಕಲಿ ಸೆಂಚುರಿಪ್ಲೈ ಉತ್ಪನ್ನಗಳು ವರದಿ ಮಾಡಲ್ಪಟ್ಟಾಗ ವಿಶಿಷ್ಟವಾದ ಪರಿಹಾರೋಪಾಯವೊಂದನ್ನು ಅವರ ತಂಡವು ಹೊರತಂದಿತು. ತನ್ನ ಎಲ್ಲ ಪ್ಲೈಬೋರ್ಡ್‌ಗಳಲ್ಲಿ QR ಕೋಡ್‌ಗಳನ್ನು ಅಳವಡಿಸಲು ಈ ಬ್ರ್ಯಾಂಡ್‌ ಪ್ರಾರಂಭಿಸಿತು. ಈ QR ಕೋಡ್‌ಗಳು ವಿಶಿಷ್ಟವಾಗಿರುತ್ತವೆ. ಸ್ಕ್ಯಾನ್‌ ಮಾಡಿದಾಗ, ಆ ಉತ್ಪನ್ನವು ಅಸಲಿಯೇ ಅಥವಾ ನಕಲಿಯೇ ಎಂಬುದನ್ನು ನಿಮಗೆ ಅದು ತಿಳಿಸುತ್ತದೆ. ಅಂತಿಮವಾಗಿ, ಈ ಅಪ್ಲಿಕೇಶನ್‌ ಅನ್ನು ಅದು ಲಾಂಚ್‌ ಮಾಡಿತು.

ಸೆಂಚುರಿಪ್ರಾಮಿಸ್‌ ಎಂದರೇನು?​​​​​​​

ಸೆಂಚುರಿಪ್ರಾಮಿಸ್‌ ಒಂದು ಮೊಬೈಲ್‌ ಅಪ್ಲಿಕೇಶನ್‌ ಆಗಿದೆ. ಸೆಂಚುರಿಪ್ಲೈ ಖರೀದಿಯೊಂದನ್ನು ನೀವು ಮಾಡಿದಾಗಲೆಲ್ಲ, ನೀವು ಮಾಡಬೇಕಿರುವುದು ಆ ಪ್ಲೈಬೋರ್ಡ್ ಮೇಲೆ ಈ ವಿಶಿಷ್ಟವಾದ QR ಕೋಡ್‌ ಅನ್ನು ಕಂಡುಕೊಳ್ಳುವುದು, ನಂತರ ಈ ಆ್ಯಪ್‌ ಮೂಲಕ ಅದನ್ನು ಸ್ಕ್ಯಾನ್‌ ಮಾಡುವುದು ಅಷ್ಟೇ. ಸ್ಕ್ಯಾನ್‌ ಮಾಡಿದ ಪ್ಲೈಬೋರ್ಡ್‌ ಒಂದು ಅಸಲಿ ಉತ್ಪನ್ನವೇ ಅಥವಾ ನಕಲಿಯೇ ಎಂಬುದನ್ನು ಈ ಆ್ಯಪ್‌ ನಿಮಗೆ ತಿಳಿಸುತ್ತದೆ. ಇನ್ನೂ ಮುಂದುವರೆದು, ಆ ಪ್ಲೈಬೋರ್ಡ್‌ಗೆ ಸಂಬಂಧಿಸಿದ ತಯಾರಿಕಾ ವಿವರಗಳನ್ನೂ ಸಹ ಅದು ನಿಮಗೆ ತಿಳಿಸುತ್ತದೆ.​​​​​​​

ಸೆಂಚುರಿಪ್ರಾಮಿಸ್‌ ಆ್ಯಪ್‌ ಅನ್ನು ಬಳಸುವುದು ಹೇಗೆ?

ನಿಮ್ಮ ಮನೆ ಅಥವಾ ವಾಣಿಜ್ಯ ಸ್ಥಳವನ್ನು ನೀವು ನಿರ್ಮಿಸುವಾಗ, ಅತ್ಯುತ್ತಮ ಸಾಮಗ್ರಿಗಳು ಬಳಸಲ್ಪಡಬೇಕು ಎಂದು ನೀವು ಬಯಸುತ್ತೀರಿ. ಉನ್ನತ ಗುಣಮಟ್ಟ ಹಾಗೂ ಬಾಳಿಕೆ ಬರುವ ಉತ್ಪನ್ನಗಳಿಗೆ ಹೆಸರುವಾಸಿಯಾಗಿರುವ ಸೆಂಚುರಿಪ್ಲೈ ಒಂದು ಜನಪ್ರಿಯ ಬ್ರ್ಯಾಂಡ್‌ ಆಗಿದೆ. ಆದ್ದರಿಂದ, ಅಸಲಿ ಪ್ಲೈವುಡ್‌ ಅನ್ನೇ ನೀವು ಖರೀದಿಸುತ್ತಿದ್ದೀರಿ, ಕಡಿಮೆ ಗುಣಮಟ್ಟದ ಪ್ಲೈವುಡ್‌ ಅನ್ನಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಇದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ, ಎಲ್ಲ ಸೆಂಚುರಿಪ್ಲೈ ಪ್ಲೈವುಡ್‌ಗಳಲ್ಲಿ ಲಭ್ಯವಿರುವ QR ಕೋಡ್‌ ಅನ್ನು ಸೆಂಚುರಿಪ್ಲೈ ಮೊಬೈಲ್/ಟ್ಯಾಬ್ಲೆಟ್‌ ಆ್ಯಪ್‌ ಮೂಲಕ ನೀವು ಸ್ಕ್ಯಾನ್‌ ಮಾಡಬೇಕು. ಅದಕ್ಕಾಗಿ ಈ ಕೆಳಗೆ ನಮೂದಿಸಿರುವ ಹಂತಗಳನ್ನು ಅನುಸರಿಸಿ.

  • ಆ್ಯಂಡ್ರಾಯ್ಡ್‌ಗೆ ಗೂಗಲ್‌ ಪ್ಲೇ ಸ್ಟೋರ್‌ನಿಂದ ಹಾಗೂ ಐಫೋನ್‌ಗಳಿಗೆ ಆ್ಯಪ್‌ ಸ್ಟೋರ್‌ನಿಂದ ಸೆಂಚುರಿಪ್ರಾಮಿಸ್ ‌ ಅಪ್ಲಿಕೇಶನ್‌ ಅನ್ನು ಡೌನ್‌ಲೋಡ್‌ ಮಾಡಿಕೊಂಡು, ನೀವು ಇನ್‌ಸ್ಟಾಲ್‌ ಮಾಡಿಕೊಳ್ಳಬಹುದು.
  • ಡೌನ್‌ಲೋಡ್‌ ಮಾಡಿಕೊಂಡ ನಂತರ, ನಿಮ್ಮ ಫೋನ್‌ನಲ್ಲಿ ಆ್ಯಪ್‌ ಅನ್ನು ಲಾಂಚ್‌ ಮಾಡಿ.
  • ಸ್ಕ್ಯಾನ್‌ QR ಕೋಡ್‌ ಅಥವಾ ಅಪ್‌ಲೋಡ್‌ QR ಕೋಡ್ ಆಯ್ಕೆಯ ಮೇಲೆ ಟ್ಯಾಪ್‌ ಮಾಡಿ.
  • ವ್ಯೂಫೈಂಡರ್‌ನಲ್ಲಿ ಆ ಕೋಡ್‌  ಫಿಟ್‌ ಆಗುವಂತೆ ನಿಮ್ಮ ಫೋನ್‌ ಕ್ಯಾಮರಾ ಅನ್ನು ಅದರ ಕಡೆಗೆ ತಿರುಗಿಸಿ.
  • ಆ್ಯಪ್‌ ಮೂಲಕ ಸ್ಕ್ಯಾನಿಂಗ್‌ ಸ್ವಯಂಚಾಲಿತವಾಗಿ ಆರಂಭವಾಗುತ್ತದೆ.
  • ಇದಕ್ಕೆ ಕೆಲವು ಸೆಕೆಂಡುಗಳು ಬೇಕಾಗಬಹುದು.
  • ಸ್ಕ್ಯಾನ್‌ ಮಾಡಿದ ಉತ್ಪನ್ನವು ಅಸಲಿ ಆಗಿದ್ದಲ್ಲಿ, ನೈಜ ಸೆಂಚುರಿಪ್ಲೈ ಉತ್ಪನ್ನ ಎಂದು ಸ್ಕ್ರೀನ್‌ ಪ್ರದರ್ಶಿಸುತ್ತದೆ.
  • ಅದಕ್ಕಿಂತಲೂ ಹೆಚ್ಚಾಗಿ, ಹೆಸರು, ಉತ್ಪಾದನಾ ದಿನಾಂಕ, ದಪ್ಪ ಹಾಗೂ ಗಾತ್ರದಂಥ ಉತ್ಪನ್ನದ ಎಲ್ಲ ವಿವರಗಳು ಪ್ರದರ್ಶಿಸಲ್ಪಡುತ್ತವೆ.
  • ಇನ್ನೂ ಹೆಚ್ಚಾಗಿ, ಇ-ವಾರಂಟಿ ಸರ್ಟಿಫಿಕೇಟ್‌ ಅನ್ನೂ ಸಹ ನೀವು ಜನರೇಟ್‌ ಮಾಡಿ, ಅದನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.
  • ಅಂತಿಮವಾಗಿ, ನಿಮ್ಮ ಫೀಡ್‌ಬ್ಯಾಕ್‌ ಅನ್ನು ಹಂಚಿಕೊಳ್ಳುವ ಹಾಗೂ ಪ್ರಸ್ತುತ ನಡೆಯುತ್ತಿರುವ ಡೀಲ್‌ಗಳು ಮತ್ತು ಆಫರ್‌ಗಳನ್ನು ವೀಕ್ಷಿಸುವ ಆಯ್ಕೆಯನ್ನೂ ಸಹ ಅದು ಹೊಂದಿದೆ.

ಪ್ಲೈವುಡ್‌ನಲ್ಲಿ CML ನಂಬರ್‌ ಅನ್ನು ಪರಿಶೀಲಿಸುವುದು ಹೇಗೆ?

CML ನಂಬರ್‌ಗಳು ಎಂದರೆ ಲೈಸನ್ಸ್‌ ನಂಬರ್‌ಗಳು. CML ಎಂದರೆ ಸರ್ಟಿಫಿಕೇಟ್‌ ಆಫ್‌ ಮ್ಯಾನ್ಯುಫ್ಯಾಕ್ಚರಿಂಗ್‌ ಲೈಸನ್ಸ್‌ ಇದರ ಸಂಕ್ಷಿಪ್ತರೂಪ. ಇದು ಪ್ಲೈವುಡ್‌ ಮೇಲಿನ ನಂಬರ್‌ ಪ್ಲೇಟ್‌ನಂತೆ ವರ್ತಿಸುತ್ತದೆ. ಸ್ಥಳದ ಮೇಲೆ ಆಧರಿತವಾಗಿ ಫ್ಯಾಕ್ಟರಿಗಳ ಬೇರೆಬೇರೆ ಗ್ರೇಡ್‌ಗಳ ವಿವರಗಳನ್ನು CML ನಿಮಗೆ ನೀಡುತ್ತದೆ. ಭಾರತೀಯ ಮಾನಕ ಬ್ಯೂರೊ ಇದನ್ನು ಹಂಚಿಕೆ ಮಾಡುತ್ತದೆ.​​​​​​​

ನನ್ನ ಉತ್ಪನ್ನವು ಸೆಂಚುರಿಪ್ರಾಮಿಸ್‌ ಅನ್ನು ಹೊಂದಿಲ್ಲದಿದ್ದಲ್ಲಿ ಏನು ಮಾಡಬೇಕು?

ಸೆಂಚುರಿಪ್ಲೈ ಉತ್ಪನ್ನದ ಮೇಲೆ ಲಭ್ಯವಿರುವ QR ಕೋಡ್‌ ಅನ್ನು ನೀವು ಸ್ಕ್ಯಾನ್‌ ಮಾಡಿ, ಇದು ಒಂದು ನೈಜ ಸೆಂಚುರಿಪ್ಲೈ ಉತ್ಪನ್ನವಲ್ಲ ಎಂದು ಆ್ಯಪ್‌ ತೋರಿಸಿದಲ್ಲಿ, ಅದು ಒಂದು ಖೋಟಾ ಹಾಗೂ ಕಡಿಮೆ-ಗುಣಮಟ್ಟದ ಉತ್ಪನ್ನ ಎಂದು ನೀವು ತಿಳಿದುಕೊಳ್ಳಬೇಕು. ನಿಮ್ಮ ಹಣವು ವ್ಯರ್ಥವಾಗುವುದರಿಂದ ದಯವಿಟ್ಟು ಇಂಥ ಉತ್ಪನ್ನಗಳನ್ನು ಕೊಳ್ಳಬೇಡಿ. ಇಂಥ ಪ್ರಕರಣವನ್ನು ನೀವು ತಕ್ಷಣ ವರದಿ ಮಾಡಬೇಕು. ಮಾರಾಟಗಾರರನ್ನು ಸಂಪರ್ಕಿಸಿ, ನಿಮ್ಮ ಖರೀದಿಯ ವಿವರಗಳನ್ನು ಪರಿಶೀಲಿಸಿ.​​​​​​​

ಸೆಂಚುರಿಪ್ರಾಮಿಸ್‌ ಆ್ಯಪ್‌ ಅನ್ನು ಯಾರು ಬಳಸಬಹುದು?

ಸೆಂಚುರಿಪ್ರಾಮಿಸ್ ‌ ಆ್ಯಪ್ ಕೇವಲ ಗ್ರಾಹಕರಿಗಷ್ಟೇ ಅಲ್ಲದೇ, ಡೀಲರ್‌ಗಳು, ರಿಟೇಲರ್‌ಗಳು ಮತ್ತು ಕಾಂಟ್ರ್ಯಾಕ್ಟರ್‌ಗಳಿಗೂ ಸಹ ಉಪಯುಕ್ತವಾಗಿರುತ್ತದೆ. ಉತ್ಪನ್ನದ ನೈಜತೆಯನ್ನು ಗ್ರಾಹಕರು ಪರಿಶೀಲಿಸಬಹುದಾದಂತೆ, ಇ-ವಾರಂಟಿಯನ್ನೂ ಸಹ ಅವರು ಜನರೇಟ್‌ ಮಾಡಿ, ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಅದೇ ಮತ್ತೊಂದೆಡೆಗೆ, ಡೀಲರ್‌ಗಳು ಹಾಗೂ ರಿಟೇಲರ್‌ಗಳು ತಮ್ಮ ಗ್ರಾಹಕರ ವಿಶ್ವಾಸವನ್ನು ಗಳಿಸಿಕೊಳ್ಳಲು ಈ ಆ್ಯಪ್ ಅನ್ನು ಬಳಸಿಕೊಳ್ಳಬಹುದು. ಲಭ್ಯವಿರುವ ಇತ್ತೀಚಿನ ಡೀಲ್‌ಗಳು ಹಾಗೂ ಆಫರ್‌ಗಳನ್ನು ಗ್ರಾಹಕರು ಮತ್ತು ಕಾಂಟ್ರ್ಯಾಕ್ಟರ್‌ಗಳು ಇಬ್ಬರೂ ವೀಕ್ಷಿಸಬಹುದು. ಆದಾಗ್ಯೂ, ಆ್ಯಪ್‌ ಅನ್ನು ಬಳಸುವ ಮೊದಲು ರಿಟೇಲರ್‌ಗಳು, ಡೀಲರ್‌ಗಳು ಮತ್ತು ಕಾಂಟ್ರ್ಯಾಕ್ಟರ್‌ಗಳು ಮಾನ್ಯ ದಾಖಲೆಗಳನ್ನು ಒದಗಿಸಿ, ಅದರಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ.​​​​​​​

ಪ್ಲೈವುಡ್‌ ಅನ್ನು ಗುರುತಿಸುವುದು ಹೇಗೆ?​​​​​​

ಉತ್ತಮ-ಗುಣಮಟ್ಟದ, ಬ್ರ್ಯಾಂಡೆಡ್ ಹಾಗೂ ಬಾಳಿಕೆ ಬರುವ ಪ್ಲೈವುಡ್‌ ಅನ್ನು ನೀವು ಕೊಳ್ಳಬಯಸಿದಲ್ಲಿ, ಈ ಕೆಳಗಿನ ಅಂಶಗಳ ಕಡೆಗೆ ನೋಡಿ:​​​​​​​

1. ಬೋರ್ಡ್‌ ಮೇಲೆ ಮುದ್ರಿಸಲ್ಪಟ್ಟಿರುವ ISI ಗುರುತನ್ನು ನೋಡಿ. IS:303 ಅಥವಾ IS 701 ಗುರುತು ಇರಬೇಕು.

2. ಬೋರ್ಡ್‌ ಮೇಲೆ ಮುದ್ರಿಸಲ್ಪಟ್ಟಿರುವ CML ನಂಬರ್‌ ಅನ್ನು ನೋಡಿ. ISI ಗುರುತುಗಳನ್ನು ನಕಲಿಸಬಹುದು. ಆದ್ದರಿಂದ, ಸದಾ CML ನಂಬರ್‌ಗಳನ್ನೂ ಸಹ ಧೃಢೀಕರಿಸುವುದು ಉತ್ತಮ.

3. ಸೆಂಚುರಿಪ್ಲೈ ಪ್ಲೈವುಡ್‌ ಮೇಲೆ ಇರುವ ವಿಶಿಷ್ಟವಾದ QR ಕೋಡ್‌ ಅನ್ನು ಕಂಡುಕೊಳ್ಳಿ. ಸೆಂಚುರಿಪ್ರಾಮಿಸ್ ‌ ಆ್ಯಪ್‌ ಮೂಲಕ ಅದನ್ನು ಸ್ಕ್ಯಾನ್‌ ಮಾಡಿ. ಆ ಪ್ಲೈವುಡ್‌ ಅಸಲಿಯೇ ಅಥವಾ ನಕಲಿಯೇ ಎಂಬುದು ನಿಮಗೆ ತಕ್ಷಣ ಕಂಡುಬರುತ್ತದೆ.

4. ಖುದ್ದಾಗಿ ಖರೀದಿಸುತ್ತಿದ್ದಲ್ಲಿ, ಗಾತ್ರವನ್ನು ಪರಿಶೀಲಿಸಿ ಹಾಗೂ ಬೋರ್ಡ್‌ ಮೇಲೆ ತಟ್ಟಿ. ಬರುವ ಶಬ್ದವು ಪ್ರತಿ ಬಾರಿ ಒಂದೇ ರೀತಿ ಇದ್ದಲ್ಲಿ, ಅದು ಉತ್ತಮ ಗುಣಮಟ್ಟದ ಪ್ಲೈವುಡ್‌ ಆಗಿರುತ್ತದೆ.

5. ಪ್ಲೈವುಡ್‌ನ ಅಡ್ಡ-ಕೊಯ್ತದಲ್ಲಿ ಯಾವುದೇ ಅಂತರಗಳು ಇಲ್ಲದಿರುವುದನ್ನು ಪರಿಶೀಲಿಸಿ.

ತೀರ್ಮಾನ​​​​​​​

ಹೋಮ್‌ ಡೆಕೊರ್‌ ಮತ್ತು ಫರ್ನಿಶಿಂಗ್ ಮಾರುಕಟ್ಟೆಯಲ್ಲಿ‌ ನಿರ್ಣಾಯಕ ಪಾತ್ರವೊಂದನ್ನು ಪ್ಲೈವುಡ್‌ ವಹಿಸುತ್ತದೆ. ಅದರ ಕೈಗೆಟುಕುವ ಬೆಲೆ ಮತ್ತು ಬಾಳಿಕೆ ಬರುವಿಕೆಯಿಂದಾಗಿ, ಅದು ಕಟ್ಟಿಗೆಯ ಒಂದು ಜನಪ್ರಿಯ ಪರ್ಯಾಯವಾಗಿದೆ. ಆದ್ದರಿಂದ, ಅದಕ್ಕೆ ಅಗಾಧವಾದ ಬೇಡಿಕೆ ಇದೆ. ಆದರೆ ಈ ಬೇಡಿಕೆಯಿಂದಾಗಿ, ಪ್ರತಿಷ್ಠಿತ ಬ್ರ್ಯಾಂಡ್‌ಗಳ ಅನೇಕ ನಕಲಿ ಉತ್ಪನ್ನಗಳೂ ಸಹ ಮಾರುಕಟ್ಟೆಯಲ್ಲಿ ಲಭ್ಯವಿವೆ. ಸೆಂಚುರಿಪ್ರಾಮಿಸ್ ಆ್ಯಪ್ ಅನ್ನು ಬಳಸುವ ಮೂಲಕ ಕೇವಲ ಒಂದು ಟ್ಯಾಪ್‌ನೊಂದಿಗೆ ಉನ್ನತ-ಗುಣಮಟ್ಟದ ಸೆಂಚುರಿಪ್ಲೈ ಉತ್ಪನ್ನಗಳನ್ನು ನೀವು ಕೊಳ್ಳಬಹುದು!​​​​​​​

Leave a Comment