ಮಾರುಕಟ್ಟೆಯಲ್ಲಿ ನಕಲಿ ಪ್ಲೈವುಡ್ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ಈ ಸಮಸ್ಯೆಯನ್ನು ಹಿಮ್ಮೆಟ್ಟಿಸಲು, ತನ್ನ ಎಲ್ಲ ಪ್ಲೈಬೋರ್ಡ್‌ಗಳಲ್ಲಿ ವಿಶಿಷ್ಟವಾದ QR code ಗಳನ್ನು ಅಳವಡಿಸಿಕೊಳ್ಳುವಲ್ಲಿ CenturyPly ದೇಶದಲ್ಲಿಯೇ ಮೊದಲಿಗನಾಗಿದೆ. CenturyPromise App ಅನ್ನು ನೀವು ಡೌನ್‌ಲೋಡ್ ಮಾಡಿಕೊಂಡು, ಈ QR code ಅನ್ನು ಸ್ಕ್ಯಾನ್ ಮಾಡಲು ಬಳಸಬಹುದು. ಸ್ಕ್ಯಾನ್ ಮಾಡಿದ ನಂತರ, ಆ ಪ್ಲೈಬೋರ್ಡ್ ಒಂದು ಒರಿಜಿನಲ್ CenturyPly ಉತ್ಪನ್ನವೇ ಅಥವಾ ಒಂದು ನಕಲಿ ಉತ್ಪನ್ನವೇ ಎಂಬುದನ್ನು ಈ QR code ನಿಮಗೆ ತಿಳಿಸುತ್ತದೆ. ಇದರ ಜೊತೆಯಲ್ಲಿಯೇ, ಆ ಪ್ಲೈಬೋರ್ಡ್ ಅನ್ನು ಎಲ್ಲಿ ಉತ್ಪಾದಿಸಲಾಗಿದೆಯೋ ಆ ಕಾರ್ಖಾನೆಯ ವಿವರಗಳನ್ನೂ ಸಹ ಅದು ಒದಗಿಸುತ್ತದೆ. CenturyPromise App ನೊಂದಿಗೆ ನಿಮ್ಮಿಂದ ಅಥವಾ ನಿಮ್ಮ ಗ್ರಾಹಕರಿಂದ ಮಾಡಲಾದ ಖರೀದಿಯೊಂದಕ್ಕೆ ಇ-ವಾರಂಟಿ ಸರ್ಟಿಫಿಕೇಟ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಲೂ ಸಹ ನಿಮಗೆ ಸಾಧ್ಯವಾಗುತ್ತದೆ.
CenturyPromise app ಅನ್ನು ಗ್ರಾಹಕರು, ಡೀಲರ್‌ಗಳು, ರಿಟೇಲರ್‌ಗಳು ಮತ್ತು ಕಾಂಟ್ರ್ಯಾಕ್ಟರ್‌ಗಳು ಬಳಸಬಹುದು. ಖರೀದಿಸಿದ ಪ್ಲೈಬೋರ್ಡ್‌ನ ಅಧೀಕೃತತೆಯನ್ನು ಪತ್ತೆ ಮಾಡಲು, ಇ-ವಾರಂಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಲು ಮತ್ತು ಇತ್ತೀಚಿನ ಆಫರ್‌ಗಳು ಮತ್ತು ಪ್ರೊಮೋಶನ್‌ಗಳ ಬಗ್ಗೆ ಅಪ್ಡೇಟ್ ಆಗಿ ಇರಲು ಗ್ರಾಹಕರು ಇದನ್ನು ಬಳಸಬಹುದು. ತಮ್ಮ ಉತ್ಪನ್ನಗಳ ಅಧೀಕೃತತೆಯ ಬಗ್ಗೆ ಪಾರದರ್ಶಕವಾಗಿರುವ ಮೂಲಕ ತಮ್ಮ ಗ್ರಾಹಕರ ವಿಶ್ವಾಸವನ್ನು ಗಳಿಸಿಕೊಳ್ಳಲು ಡೀಲರ್‌ಗಳು, ಕಾಂಟ್ರ್ಯಾಕ್ಟರ್‌ಗಳು ಮತ್ತು ರಿಟೇಲರ್‌ಗಳು ಈ ಆ್ಯಪ್ ಅನ್ನು ಬಳಸಬಹುದು ಹಾಗೂ ತಮ್ಮ ಗ್ರಾಹಕರಿಗೆ ಇ-ವಾರಂಟಿ ಸರ್ಟಿಫಿಕೇಟ್‌ಗಳನ್ನೂ ಸಹ ನೀಡಬಹುದು.
ಇ-ವಾರಂಟಿ ಸರ್ಟಿಫಿಕೇಟ್‌ನ ಲಭ್ಯತೆ
ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್‌ಗಳೊಂದಿಗೆ ಹೊಂದಾಣಿಕೆಯಾಗುತ್ತದೆ
ಡೂಪ್ಲಿಕೇಟ್-ಪ್ರೂಫ್ ಆಗಿದೆ
ಉಚಿತವಾಗಿದೆ
iOS ಮತ್ತು Playstore (ಪ್ಲೇಸ್ಟೋರ್) ನಲ್ಲಿ ಲಭ್ಯವಿದೆ