ಸೈನಿಕ್710 ಪ್ಲೈವುಡ್‌ ನೀರಿನ ಹಾನಿಯ ವಿರುದ್ಧದ ನಿಮ್ಮ ರಕ್ಷಾ ಕವಚ
Centuryply Blog

Interested in
knowing more?

ಸೈನಿಕ್710 ಪ್ಲೈವುಡ್‌ ನೀರಿನ ಹಾನಿಯ ವಿರುದ್ಧದ ನಿಮ್ಮ ರಕ್ಷಾ ಕವಚ

ಪರಿಚಯ

ನೀರಿನಿಂದ ಹಾಳಾಗುವ ಭಯವಿಲ್ಲದೇ ದೀರ್ಘಕಾಲ ಬಾಳುವ ಪ್ಲೈವುಡ್‌ ಅನ್ನು ನೀವು ಹೊಂದಬಹುದು ಎಂದು ನಾವು ನಿಮಗೆ ಹೇಳಿದಲ್ಲಿ ನೀವು ನಂಬುತ್ತೀರಾ? ಸೈನಿಕ್710‌ ಪ್ಲೈವುಡ್‌ನೊಂದಿಗೆ ಇದು ಸಾಧ್ಯವಿದೆ. ಈ ಲೇಖನದಲ್ಲಿ, ಸೆಂಚುರಿಪ್ಲೈರವರ ಸೈನಿಕ್710 ಪ್ಲೈವುಡ್ ಗುಣಲಕ್ಷಣಗಳ ಮೇಲೆ ಸ್ವಲ್ಪ ಬೆಳಕನ್ನು ನಾವು ಚೆಲ್ಲುತ್ತೇವೆ. ಅದಕ್ಕಿಂತಲೂ ಹೆಚ್ಚಾಗಿ, ಪ್ಲೈವುಡ್‌ನ ಬೇರೆಬೇರೆ ಗ್ರೇಡ್‌ಗಳ ಬಗ್ಗೆಯೂ ಸಹ ಕೆಲವು ಮಾಹಿತಿಯನ್ನು ನಾವು ಹಂಚಿಕೊಳ್ಳುತ್ತೇವೆ. ಹಾಗಾದರೆ, ಆರಂಭಿಸೋಣವೇ?

ಸೈನಿಕ್710 ಪ್ಲೈವುಡ್‌ ಅನ್ನು ಎಲ್ಲಿ ಬಳಸಬಹುದು

ಗುಣಮಟ್ಟದ ಪ್ಲೈವುಡ್ ಅನ್ನು ನಿರ್ಮಾಣ, ಒಳಾಂಗಣ ವಿನ್ಯಾಸ ಮತ್ತು ಪೀಠೋಪಕರಣ ಉದ್ದಿಮೆಗಳಲ್ಲಿ ಬಳಸಲಾಗುತ್ತದೆ. ಅದರ ಕೆಲವು ಅತ್ಯಂತ ಸಾಮಾನ್ಯ ಅನ್ವಕತೆಗಳೆಂದರೆ:

●  ಲೈಟ್‌ ಪಾರ್ಟಿಶನ್‌ ಅನ್ನು ನಿರ್ಮಿಸುವುದು

●  ಪೀಠೋಪಕರಣಗಳನ್ನು, ನಿರ್ದಿಷ್ಟವಾಗಿ ಕಪ್‌ಬೋರ್ಡ್‌ಗಳು, ಕಿಚನ್‌ ಕ್ಯಾಬಿನೆಟ್‌ಗಳು ಮತ್ತು ಆಫೀಸ್‌ ಟೇಬಲ್‌ಗಳನ್ನು ನಿರ್ಮಿಸುವುದು

●  ಕಟ್ಟಿಗೆಯ ಚೌಕಟ್ಟನ್ನು ನಿರ್ಮಿಸುವುದು

●  ಫ್ಲೋರಿಂಗ್‌ ಸಿಸ್ಟಮ್‌ಗಳ ಒಂದು ಘಟಕಾಂಶವಾಗಿ

ಸೈನಿಕ್‌ ಪ್ಲೈವುಡ್‌ನ ಗುಣಮಟ್ಟದ ಗುಣಲಕ್ಷಣಗಳು

ಭಾರತೀಯ ಮನೆಯೊಂದರ ವಾತಾವರಣಕ್ಕೆ ಒಂದು ಉತ್ತಮ ಆಯ್ಕೆಯಾಗಿರುವ ಸೈನಿಕ್‌ ಪ್ಲೈವುಡ್‌ನ ಈ ಗುಣಮಟ್ಟದ ಗುಣಲಕ್ಷಣಗಳನ್ನು ಪರಿಶೀಲಿಸಿ.

● ಅಧಿಕ ಬಲ:

ಪ್ಲೈವುಡ್‌ ಅನ್ನು ಯಾವ ಕಟ್ಟಿಗೆಯಿಂದ ನಿರ್ಮಿಸಲಾಗುತ್ತದೆಯೋ ಅದರ ಸಂರಚನಾತ್ಮಕ ಬಲವನ್ನು ಅದು ಹೊಂದಿರುತ್ತದೆ. ಇದು ಅದರ ಗುಣಲಕ್ಷಣಗಳಿಗೆ ಹೆಚ್ಚುವರಿಯಾಗಿ ಇದೆ, ಪ್ರತಿ ವಿನೀರ್‌ನ ಗ್ರೇನ್‌ಗಳನ್ನು ಪರಸ್ಪರ 90 ಡಿಗ್ರೀ ಕೋನದಲ್ಲಿ ಹಾಕಲಾಗಿರುತ್ತದೆ. ಇದರಿಂದ ಸಂಪೂರ್ಣ ಶೀಟ್‌, ವಿಶೇಷವಾಗಿ ಅಂಚುಗಳಲ್ಲಿ ಮೊಳೆ ಹೊಡೆಯುವಾಗ ಸೀಳುವಿಕೆ ನಿರೋಧಕವಾಗುತ್ತದೆ. ಸೈನಿಕ್710 ಪ್ಲೈವುಡ್ ಬಗ್ಗೆ ಹೇಳುವುದಾದಲ್ಲಿ, ಹೆಚ್ಚಿನ ಸ್ಥಿರತೆಗಾಗಿ ಸಂಪೂರ್ಣ ಶೀಟಿಗೆ ಸಮಾನ ಬಲವನ್ನು ಅದು ನೀಡುತ್ತದೆ. ಇನ್ನೂ ಹೆಚ್ಚಾಗಿ, ನಿಗದಿಪಡಿಸಿದ ಮಾನಕಗಳ ಪ್ರಕಾರ ಒಂದು ಆದರ್ಶಪ್ರಾಯವಾದ ಬಲ ಹಾಗೂ ತೂಕದ ಅನುಪಾತವನ್ನು ಅದು ಹೊಂದಿದೆ. ಇದರಿಂದ ಮಾಡ್ಯುಲರ್‌ ಕಿಚನ್‌ ಕ್ಯಾಬಿನೆಟ್‌ಗಳು, ವಾರ್ಡ್‌ರೋಬ್‌ಗಳು ಮತ್ತು ಶಿಯರ್‌ ವಾಲ್‌ಗಳಿಗೆ ಅದು ಅತ್ಯಂತ ಸೂಕ್ತವಾಗುತ್ತದೆ.

● ತೇವಾಂಶ ನಿರೋಧಕತೆ:

ಪ್ಲೈವುಡ್‌ ಅನ್ನು ಜೋಡಿಸಲು ಬಳಸಲಾಗುವ ಅಢೆಜಿವ್‌ನ ವಿಧವು ಅದನ್ನು ತೇವಾಂಶ ಮತ್ತು ಆರ್ದ್ರತೆಗೆ ನಿರೋಧಕವಾಗಿಸುತ್ತದೆ. ಪೇಂಟ್‌ ಅಥವಾ ವಾರ್ನಿಶ್‌ನ ಒಂದು ಪದರವೂ ಸಹ ನೀರಿನ ಹಾನಿಗೆ ನಿರೋಧಕತೆಯನ್ನು ಹೆಚ್ಚಿಸುತ್ತದಾದರೂ, ಅಂತಿಮವಾಗಿ ಪ್ಲೈವುಡ್‌ನ ಗುಣಮಟ್ಟವು ಪಣಕ್ಕೊಡ್ಡಲ್ಪಡುತ್ತದೆ! ಶೆಲ್ಫ್‌ಗಳು, ಮತ್ತು ಕಿಚನ್‌ ಕ್ಯಾಬಿನೆಟ್‌ಗಳಂಥ ಬಾಹ್ಯ ಬಳಕೆಗೆ ಅದಕ್ಕಾಗಿಯೇ ಸೈನಿಕ್‌710 ಪ್ಲೈವುಡ್‌ ಸೂಕ್ತವಾಗುತ್ತದೆ. ಕಾಂಕ್ರೀಟ್‌ ಸೆಟ್‌ ಆಗುವಾಗ ಅದನ್ನು ಹಿಡಿದಿರಿಸಲೂ ಸಹ ಇದು ಸೂಕ್ತವಾಗಿದೆ. ಫ್ಲೋರ್‌ಗಳ ಮೇಲೆಯೂ ಸೇರಿದಂತೆ, ಆಂತರಿಕ ಬಳಕೆಗಳಲ್ಲಿಯೂ ಸಹ ತೇವಾಂಶ ನಿರೋಧಕತೆಯು ಪ್ರಮುಖವಾಗಿರುತ್ತದೆ. ನೀರು ಮತ್ತು ವಿಪರೀತ ಉಷ್ಣಾಂಶಕ್ಕೆ ಒಡ್ಡಲ್ಪಟ್ಟಾಗ ಪ್ಲೈವುಡ್‌ ವಕ್ರವಾಗದಿರುವುದು, ಕುಗ್ಗದಿರುವುದು, ಅಥವಾ ಹಿಗ್ಗದಿರುವುದನ್ನು ಇದು ಖಚಿತಪಡಿಸುತ್ತದೆ.

● ಅಪ್ಪಳಿಕೆ ನಿರೋಧಕತೆ:

ಪ್ಲೈ ಶೀಟ್‌ಗಳ ಕ್ರಾಸ್‌ ಲ್ಯಾಮಿನೇಶನ್‌ನಿಂದಾಗಿ, ಅಧಿಕ ಕರ್ಷಕ ಬಲವನ್ನು (ಟೆನ್ಸೈಲ್‌ ಸ್ಟ್ರೆಂಗ್ತ್) ಪ್ಲೈವುಡ್‌ ಹೊಂದಿರುತ್ತದೆ. ಕರ್ಷಕ ಒತ್ತಡವನ್ನು ಕಡಿಮೆ ಮಾಡುತ್ತಾ, ಬಲವನ್ನು ಹೆಚ್ಚಿನ ಕ್ಷೇತ್ರದ ಮೇಲೆ ಇದು ವಿತರಿಸುತ್ತದೆ. ತನ್ನ ನಿಯೋಜಿತ ಲೋಡ್‌ಗಿಂತ ಎರಡು ಪಟ್ಟಿನವರೆಗಿನ ಓವರ್‌ಲೋಡಿಂಗ್‌ ಅನ್ನು ತಡೆದುಕೊಳ್ಳಲು ಸೈನಿಕ್‌710 ಪ್ಲೈವುಡ್‌ ಆದ್ದರಿಂದ ಸಮರ್ಥವಾಗಿದೆ. ಅಲ್ಪಾವಧಿ ಕಂಪನ ಚಟುವಟಿಕೆ ಅಥವಾ ಗಾಳಿಯು ಜೋರಾಗಿ ಬೀಸುವ ಸಂದರ್ಭದಲ್ಲಿ ಇದು ನಿರ್ಣಾಯಕವಾಗಿರುತ್ತದೆ. ಫ್ಲೋರಿಂಗ್‌ ಮತ್ತು ಕಾಂಕ್ರೀಟ್‌ ಫ್ರೇಮ್‌ವರ್ಕ್‌ನಲ್ಲಿಯೂ ಸಹ ಇದು ಉಪಯುಕ್ತವಾಗಿರುತ್ತದೆ.

BWP ಗ್ರೇಡ್‌ ಪ್ಲೈವುಡ್: ತೇವಾಂಶ ಹಾನಿಯ ವಿರುದ್ಧದ ಒಂದು ಕವಚ!

ಸೆಂಚುರಿಪ್ಲೈ, ಒಂದು BWP ಗ್ರೇಡ್‌ ಪ್ಲೈವುಡ್‌ ಆಗಿರುವ ಸೈನಿಕ್‌710 ಪ್ಲೈವುಡ್‌ ಅನ್ನು ಒದಗಿಸುತ್ತದೆ. BWP ಅಂದರೆ ಬಾಯ್ಲಿಂಗ್‌ ವಾಟರ್‌ ಪ್ರೂಫ್‌ ಪ್ಲೈವುಡ್‌, ಇದು ತೇವಾಂಶದಿಂದ ಹಾನಿಯುಂಟಾಗದಂತೆ ಒಂದು ಕವಚದ ರೀತಿಯಲ್ಲಿ ವರ್ತಿಸುತ್ತದೆ. ಹವಾಮಾನ ಬದಲಾವಣೆಗಳು ಆಗಾಗ್ಗೆ ಉಂಟಾಗುತ್ತಲೇ ಇರುವ ಭಾರತದಂಥ ದೇಶದಲ್ಲಿನ ಪ್ರತಿ ಒಳಾಂಗಣಕ್ಕೆ ಇದು ಕಡ್ಡಾಯವಾಗಿದೆ. ಭಾರೀ ಮಳೆ, ಬೇಸಿಗೆ, ಚಳಿ, ಗಾಳಿ ಹೀಗೆ ಎಲ್ಲ ಋತುಮಾನಗಳನ್ನು ತಡೆದುಕೊಳ್ಳುವ ಈ ಬಾಯ್ಲಿಂಗ್‌ ವಾಟರ್‌ ಪ್ರೂಫ್‌ ಪ್ಲೈವುಡ್‌ ಒಂದು ಉತ್ತಮವಾದ ಕಚ್ಛಾ ಸಾಮಗ್ರಿಯಾಗಿದೆ.

ಅದಕ್ಕಿಂತಲೂ ಹೆಚ್ಚಾಗಿ, ಪ್ಲೈವುಡ್‌ನ ಈ ಗ್ರೇಡ್‌ ಹೆಚ್ಚಿನ ಸ್ಥಿತಿಸ್ಥಾಪಕತೆಯನ್ನು ಹೊಂದಿದ್ದು ದೀರ್ಘ ಕಾಲ ಬಾಳುತ್ತದೆ. ಹೈ ಇಂಪ್ಯಾಕ್ಟ್‌ ರೆಜಿಸ್ಟನ್ಸ್‌, ಮಾಯಿಶ್ಚರ್‌ ರೆಜಿಸ್ಟನ್ಸ್‌ ಮತ್ತು ಹೈ ಸ್ಟ್ರೆಂಗ್ತ್‌ಗಳಂಥ ಗುಣಮಟ್ಟದ ವೈಶಿಷ್ಟ್ಯತೆಗಳನ್ನು ಹೆಚ್ಚಿಸುವ ಮೂಲಕ ಕಿಚನ್‌ ಮತ್ತು ಬಾತ್‌ರೂಮ್‌ಗಳಂಥ ಪ್ರದೇಶಗಳಲ್ಲಿಯೂ ಸಹ ಈ ಪ್ಲೈವುಡ್‌ ಅನ್ನು ಬಳಸಬಹುದು.

ಅಂತಿಮವಾಗಿ

ಒಂದು ರೆಗ್ಯುಲರ್‌ ಪ್ಲೈವುಡ್‌ ಮತ್ತು BWP ಸೈನಿಕ್ಪ್ಲೈವುಡ್ ಇವುಗಳ ನಡುವಿನ ವ್ಯತ್ಯಾಸವನ್ನು ಈಗಾಗಲೇ ನೀವು ತಿಳಿದುಕೊಂಡಿದ್ದೀರಿ. ಭಾರತದಲ್ಲಿ, ಮಳೆಗಾಲವೇ ಇರಲಿ ಅಥವಾ ಆರ್ದ್ರತೆಯೇ ಇರಲಿ, ತೇವಾಂಶ ಎಂಬುದು ಸದಾ ಇರುವ ಒಂದು ಸಮಸ್ಯೆಯಾಗಿದೆ. ನಿಮ್ಮ ಪ್ಲೈವುಡ್‌ ಜಲ ನಿರೋಧಕವಾಗಿರಬೇಕೆಂದು ನೀವು ಬಯಸುತ್ತೀರಾದಲ್ಲಿ, ಸೈನಿಕ್‌710 ಪ್ಲೈವುಡ್‌ನ ರಕ್ಷಣೆಯನ್ನು ನಿಮ್ಮದಾಗಿಸಿಕೊಳ್ಳಿ. ಆದ್ದರಿಂದ ನಿಮ್ಮ ಮನೆಗೆ ಅತ್ಯುತ್ತಮ ಪ್ಲೈವುಡ್‌ ಅನ್ನೇ ಬಳಸಿ. ಈ ಉತ್ಪನ್ನದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಇಲ್ಲಿ ಕ್ಲಿಕ್‌ ಮಾಡಿ:

https://www.centuryply.com/sainik-710-2021/kannada

Enquire Now

Add your comments

Voice Search

Speak Now

Voice Search
Web Speech API Demonstration

Click on the microphone icon and begin speaking.

Speak now.

No speech was detected. You may need to adjust your microphone settings.

Click the "Allow" button above to enable your microphone.

Permission to use microphone was denied.

Permission to use microphone is blocked. To change, go to chrome://settings/contentExceptions#media-stream

Web Speech API is not supported by this browser. Upgrade to Chrome version 25 or later.

Press Control-C to copy text.
(Command-C on Mac.)
Text sent to default email application.
(See chrome://settings/handlers to change.)