ಮನೆಯಲ್ಲಿ ಅಗ್ನಿ ಅವಘಡಗಳನ್ನು ನಾವು ಹೇಗೆ ತಡೆಗಟ್ಟಬಹುದು?
ವಿಷಯ ಕೋಷ್ಟಕ
➔ ಪರಿಚಯ
➔ ಸೆಂಚುರಿಪ್ಲೈರವರ ಫೈರ್‌ವಾಲ್ ತಂತ್ರಜ್ಞಾನ ಎಂದರೇನು?
➔ ಅಗ್ನಿ ಅವಘಡಗಳನ್ನು ಸೆಂಚುರಿಪ್ಲೈ ಪ್ಲೈವುಡ್ ಫೈರ್‌ವಾಲ್ ತಂತ್ರಜ್ಞಾನವು ಹೇಗೆ ತಡೆಯುತ್ತದೆ?
➔ ಶತಮಾನದ ಪ್ಲೈವುಡ್ ಆಗಿರುವ ಸೆಂಚುರಿಪ್ಲೈ ಫೈರ್‌ವಾಲ್ ಪ್ಲೈವುಡ್‌ಗಳನ್ನು ಬಳಸಲು ಕಾರಣಗಳು
➔ ತೀರ್ಮಾನ
ಪರಿಚಯ
ಅಗ್ನಿ ಸುರಕ್ಷತೆ ಎಂಬುದು ಯಾವುದೇ ವಾಸ್ತುಶಿಲ್ಪಿ ಅಥವಾ ಮನೆಯ ಮಾಲೀಕರಿಗೆ ಅಗತ್ಯವಾಗುವ ಅತ್ಯಂತ ನಿರ್ಣಾಯಕವಾದ ಅಂಶಗಳಲ್ಲಿ ಒಂದಾಗಿದೆ. ಇದನ್ನು ಖಚಿತಪಡಿಸಿಕೊಳ್ಳಲು ಅನೇಕ ಮನೆಗಳಲ್ಲಿ ಈಗ ಸ್ಮೋಕ್ ಡಿಟೆಕ್ಟರ್‌ಗಳು ಮತ್ತು ಅಲಾರ್ಮ್‌ಗಳನ್ನು ಅಳವಡಿಸಲಾಗಿರುತ್ತದೆ. ಆದಾಗ್ಯೂ, ಹಿಮ್ಮುಖಗೊಳಿಸಲಾಗದ ಹಾನಿಯನ್ನು ಮನೆಯ ಮಾಲೀಕರು ಆಗಲೂ ಎದುರಿಸಬೇಕಾಗುತ್ತದೆ.
ಅಗ್ನಿ ಅನಾಹುತವೊಂದರ ಸಂದರ್ಭದಲ್ಲಿ ನಿಮ್ಮ ಪೀಠೋಪಕರಣಗಳು ಇಂಧನವಾಗಿ ವರ್ತಿಸಿ, ಆಮೂಲಕ ಹಾನಿಯನ್ನು ಹೆಚ್ಚಿಸುವುದರಿಂದ, ಅವುಗಳು ಅತ್ಯಂತ ಸುಬೇಧ್ಯವಾಗಿರುತ್ತವೆ. ಆದ್ದರಿಂದ, ನಿರ್ಮಾಣ ಸಾಮಗ್ರಿಗಳ ಬೆಂಕಿ-ನಿರೋಧಕತೆಯ ಬಗ್ಗೆ ಪ್ರಮುಖ ಕಳಕಳಿಗಳು ಎತ್ತಲ್ಪಟ್ಟಿವೆ. ಪ್ಲೈವುಡ್, ಇದು ಪೀಠೋಪಕರಣಗಳನ್ನು ಮಾಡಲು ಹಾಗೂ ನಿರ್ಮಾಣಕ್ಕಾಗಿ ಅತ್ಯಂತ ಹೆಚ್ಚು ಬಳಸುವ ಸಾಮಗ್ರಿಯಾಗಿದೆ. ಅಗ್ನಿ ಅನಾಹುತಗಳನ್ನು ತಡೆಗಟ್ಟಿ, ನಿಮ್ಮ ಪ್ರೀತಿಪಾತ್ರರನ್ನು ಸುರಕ್ಷಿತರಾಗಿ ಇರಿಸುವ, ವಿಶಿಷ್ಟವಾದ ಫೈರ್ವಾಲ್ ತಂತ್ರಜ್ಞಾನವನ್ನು ಸೆಂಚುರಿಪ್ಲೈ ಅಭಿವೃದ್ಧಿಪಡಿಸಿದೆ.
ಸೆಂಚುರಿಪ್ಲೈ ಫೈರ್‌ವಾಲ್ ತಂತ್ರಜ್ಞಾನ ಎಂದರೇನು?
ಸೆಂಚುರಿಪ್ಲೈ ಫೈರ್‌ವಾಲ್ ತಂತ್ರಜ್ಞಾನವು ವರ್ಗದಲ್ಲಿಯೇ ಶ್ರೇಷ್ಠವಾದ, ಬೆಂಕಿ-ನಂದಿಸುವ, ನ್ಯಾನೊ-ಇಂಜಿನೀಯರ್ಡ್ ಕಣಗಳನ್ನು ಪ್ಲೈವುಡ್‌ನ ಪಾಲಿಮರ್ ಮ್ಯಾಟ್ರಿಕ್ಸ್‌ನೊಳಗೆ ತುಂಬುತ್ತದೆ. ಆ ಪ್ಲೈವುಡ್‌ನ ದಹನಶೀಲತೆಯನ್ನು ಇದು ಕಡಿಮೆ ಮಾಡಿ, ಮನೆಗೆ ಬಳಸಲು ಅದನ್ನು ಸುರಕ್ಷಿತವನ್ನಾಗಿಸುತ್ತದೆ.
ಅಗ್ನಿ ಅವಘಡಗಳನ್ನು ಸೆಂಚುರಿಪ್ಲೈ ಪ್ಲೈವುಡ್ ಫೈರ್‌ವಾಲ್ ತಂತ್ರಜ್ಞಾನವು ಹೇಗೆ ತಡೆಯುತ್ತದೆ?
ಅಗ್ನಿ ಅವಘಡಗಳನ್ನು ಹಾಗೂ ಅವುಗಳ ಪರಿಣಾಮಗಳನ್ನು ಕಡಿಮೆ ಮಾಡಲು ಸೆಂಚುರಿಪ್ಲೈರವರ ಫೈರ್‌ವಾಲ್ ತಂತ್ರಜ್ಞಾನವು ಮೂರು ರೀತಿಯಲ್ಲಿ ಕೆಲಸ ಮಾಡುತ್ತದೆ.
1. ಬೆಂಕಿಯನ್ನು ನಿಧಾನಿಸುತ್ತದೆ: ಅಗ್ನಿ ಅವಘಡವೊಂದರಲ್ಲಿ ಬೆಂಕಿಯನ್ನು ನಿಗ್ರಹಿಸಿ, ಅದು ಹರಡದಂತೆ ತಡೆಯುವುದು ಅತ್ಯಂತ ನಿರ್ಣಾಯಕವಾದ ಹಂತಗಳಲ್ಲಿ ಒಂದಾಗಿದೆ. ಫೈರ್‌ವಾಲ್ ತಂತ್ರಜ್ಞಾನವು ಪ್ಲೈವುಡ್‌ಗಳನ್ನು ಕಡಿಮೆ ದಹನಶೀಲವಾಗಿಸುತ್ತದೆ, ಹಾಗೂ ಬೆಂಕಿಯ ಮಾಧ್ಯಮವಾಗದಂತೆ ಅದನ್ನು ತಡೆಯುತ್ತದೆ.
2. ಸ್ವಯಂ-ಶಮನಗೊಳ್ಳುತ್ತದೆ: ಬೆಂಕಿಯನ್ನು ನಂದಿಸಲು ಸಾಮಾನ್ಯ ಪ್ಲೈವುಡ್‌ಗಳಿಗೆ ನೀರು ಅಥವಾ ಅಗ್ನಿಶಾಮಕಗಳಂಥ ಬಾಹ್ಯ ಬಲಗಳು ಅಗತ್ಯವಾದಲ್ಲಿ, ಸೆಂಚುರಿಪ್ಲೈ ಪ್ಲೈವುಡ್‌ಗೆ ಅದರ ಅಗತ್ಯವಿರುವುದಿಲ್ಲ. ಫೈರ್‌ವಾಲ್ ತಂತ್ರಜ್ಞಾನವನ್ನು ಹೊಂದಿರುವ ಈ ಪ್ಲೈವುಡ್, ಬೆಂಕಿಯ ಮೂಲವು ತೆಗೆದುಹಾಕಲ್ಪಟ್ಟ ನಂತರ ಸ್ವಯಂ-ಶಮನಗೊಳ್ಳುತ್ತದೆ.
3. ಹೊಗೆ ಉತ್ಪಾದನೆಯನ್ನು ತಡೆಗಟ್ಟುತ್ತದೆ: ಅಗ್ನಿ ಅನಾಹುತವೊಂದರ ಅತ್ಯಂತ ಅಪಾಯಕಾರಿಯಾದ ಪರಿಣಾಮವೆಂದರೆ ವಿಷಕಾರಿ ಹೊಗೆಗಳು ಉತ್ಪತ್ತಿಯಾಗುವುದಾಗಿದೆ. ಬಹುತೇಕ ಪ್ಲೈವುಡ್‌ಗಳ ತಯಾರಿಕೆಯಲ್ಲಿ ಉರಿದಾಗ ವಿಷಕಾರಿ ಅನಿಲಗಳನ್ನು ಹೊರಸೂಸುವ ರಸಾಯನಿಕಗಳು ಬಳಸಲ್ಪಡುತ್ತವೆ. ಆದರೆ, ಸೆಂಚುರಿಪ್ಲೈ ಪ್ಲೈವುಡ್ ವಿಷಕಾರಿಯಲ್ಲದ ಬಂಧಕ ಏಜಂಟ್‌ಗಳಿಂದ ತಯಾರಿಸಲ್ಪಟ್ಟಿದೆ. ಅದಕ್ಕಿಂತಲೂ ಹೆಚ್ಚಾಗಿ, ಬೆಂಕಿ ಹೊತ್ತಿಕೊಂಡಾಗ ಹೊಗೆ ಉತ್ಪತ್ತಿಯಾಗುವುದನ್ನು ಫೈರ್ವಾಲ್ ತಂತ್ರಜ್ಞಾನವು ತಡೆಯುತ್ತದೆ, ಹಾಗೂ ಉಸಿರುಗಟ್ಟುವಿಕೆಯ ಅಪಾಯವನ್ನು ಕಡಿಮೆ ಮಾಡುತ್ತದೆ.
ಫೈರ್‌ವಾಲ್ ತಂತ್ರಜ್ಞಾನ ಹೊಂದಿರುವ ಶತಮಾನದ ಪ್ಲೈವುಡ್ ಸೆಂಚುರಿಪ್ಲೈ ಪ್ಲೈವುಡ್‌ಗಳನ್ನು ಬಳಸಲು ಕಾರಣಗಳು
ನಿಮ್ಮ ಮನೆಯು ಬೆಂಕಿಗೆ ಆಹುತಿಯಾಗದಂತೆ ಸುಭದ್ರವಾಗಿದೆ ಎಂಬುದನ್ನು ತಿಳಿದುಕೊಂಡಿರುವುದಕ್ಕಿಂತ ಹೆಚ್ಚಿನ ಭರವಸೆಯು ಮತ್ತೊಂದಿಲ್ಲ. ಸೆಂಚುರಿಪ್ಲೈ ಪ್ಲೈವುಡ್ ಫೈರ್‌ವಾಲ್ ತಂತ್ರಜ್ಞಾನವನ್ನು ಬಳಸಲು ಅನೇಕ ಕಾರಣಗಳು ಇವೆ, ಅವುಗಳೆಂದರೆ:
1. ಬೆಂಕಿ ವಿಸ್ಫೋಟಗಳಿಂದ ಉಂಟಾಗುವ ಹಾನಿಯನ್ನು ಕಡಿಮೆ ಮಾಡುತ್ತದೆ
ಅವಘಡಗಳು ಎಚ್ಚರಿಕೆಯನ್ನು ನೀಡದೇ ಸಂಭವಿಸುತ್ತವಾದ್ದರಿಂದ, ತಡೆಗಟ್ಟುವಿಕೆಯು ಯಾವಾಗಲೂ ಆದ್ಯತೆಯ ಉಪಚಾರವಾಗಿರುತ್ತದೆ. ನೆರೆಗಳು ಮತ್ತು ಅಗ್ನಿ ಅನಾಹುತಗಳಂಥ ನೈಸರ್ಗಿಕ ವಿಪತ್ತುಗಳು ಮಾನವ ಜೀವ ಹಾಗೂ ಸ್ವತ್ತಿಗೆ ಗಂಭೀರ ಹಾನಿಯನ್ನುಂಟು ಮಾಡುತ್ತವೆ. ಆದ್ದರಿಂದ, ಮನೆಗಳು ಅಥವಾ ವಾಣಿಜ್ಯ ಕಟ್ಟಡಗಳನ್ನು ರಕ್ಷಿಸಲು ಅವುಗಳಲ್ಲಿ ಫೈರ್ ರಿಟಾರ್ಡಂಟ್ ಪ್ಲೈವುಡ್ ಅನ್ನು ಅಳವಡಿಸುವುದು ಸಮಂಜಸವಾಗಿರುತ್ತದೆ.
ಸೆಂಚುರಿಪ್ಲೈ ಪ್ಲೈವುಡ್‌ನ ಕಡಿಮೆ ದಹನಶೀಲತೆಯು ಕಿಡಿಯೊಂದು ಹೊತ್ತಿಕೊಳ್ಳುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ನ್ಯಾನೊ-ಇಂಜಿನೀಯರ್ಡ್ ಕಣಗಳನ್ನು ಒತ್ತಡದಡಿಯಲ್ಲಿ ಪ್ಲೈವುಡ್‌ನೊಳಗೆ ಬೆಸೆಯುವ ಮೂಲಕ ಸೆಂಚುರಿಪ್ಲೈ ದಹನಶಿಲತೆಗಾಗಿ ಅದನ್ನು ಉಪಚರಿಸುತ್ತದೆ. ಬೆಂಕಿಯಿಂದ ಉಂಟಾಗುವ ಹಾನಿಯನ್ನು ಇದು ಕಡಿಮೆ ಮಾಡುತ್ತದೆ.
2. ಜಲ-ನಿರೋಧಕ ಮತ್ತು ವಾತಾವರಣ-ಪ್ರತಿರೋಧಕ
ಬೆಂಕಿಯನ್ನು ಕುಂದಿಸುವ ಪ್ಲೈವುಡ್‌ನ ಈ ಸ್ವಭಾವವು ಬೆಂಕಿಯಿಂದ ರಕ್ಷಣೆಯನ್ನು ಒದಗಿಸುವುದಕ್ಕೆ ಹೆಚ್ಚುವರಿಯಾಗಿ ಅದನ್ನು ಜಲ-ನಿರೋಧಕ ಹಾಗೂ ವಾತಾವರಣ-ಪ್ರತಿರೋಧಕವನ್ನಾಗಿಸುತ್ತದೆ. ವಾತಾವರಣ ಮತ್ತು ನೀರನ್ನು, ಹಾಗೂ ಎಲ್ಲ ಅಗ್ನಿ ಅವಘಡಗಳನ್ನು ಕಾರ್ಯಕ್ಷಮತೆಯಿಂದ ತಡೆದುಕೊಳ್ಳುವ ರೀತಿಯಲ್ಲಿ ಬೆಂಕಿಯನ್ನು ಕುಂದಿಸುವ ಗುಣವುಳ್ಳ ಪ್ಲೈವುಡ್ ಸೃಷ್ಟಿಸಲ್ಪಡುತ್ತದೆ. ಆದ್ದರಿಂದ, ವಾತಾವರಣದ ಅಂಶಗಳಿಗೆ ಸಾಮಾನ್ಯವಾಗಿ ಒಳಪಟ್ಟಿರುವ ಕಟ್ಟಡಗಳಲ್ಲಿ ಇದು ಹೆಚ್ಚಾಗಿ ಬಳಸಲ್ಪಡುತ್ತದೆ.
3. ಗೆದ್ದಲು ಮತ್ತು ಕೊರಕ ನಿರೋಧಕ
ಗೆದ್ದಲುಗಳು ಹಾಗೂ ಕೊರಕಗಳು ಮನೆಗಳು ಮತ್ತು ಆಫೀಸುಗಳಲ್ಲಿ ಇರಿಸುವ ಪೀಠೋಪಕರಣಗಳಿಗೆ ಸುಲಭವಾಗಿ ಗಣನೀಯ ಹಾನಿಯನ್ನುಂಟು ಮಾಡುತ್ತವೆ. ಫೈರ್-ರಿಟಾರ್ಡಂಟ್ ಪ್ಲೈವುಡ್‌ನಿಂದ ಒದಗಿಸಲ್ಪಡುವ ಕೀಟ ಸಂರಕ್ಷಣೆಯೂ ಸಹ ಸುಧಾರಿಸಲ್ಪಟ್ಟಲ್ಲಿ ಹೇಗಿರುತ್ತದೆ? ಸೆಂಚುರಿಪ್ಲೈನ ಪ್ಲೈವುಡ್ ಕೀಟಗಳನ್ನು ನಿರೋಧಿಸಲು ರಸಾಯನಿಕವಾಗಿ ಉಪಚರಿಸಲ್ಪಟ್ಟಿದ್ದು, ಮನೆಗಳು ಮತ್ತು ವ್ಯವಹಾರಗಳಿಗೆ ಒಂದು ಜನಪ್ರಿಯವಾದ ನಿರ್ಮಾಣ ಸಾಮಗ್ರಿಯಾಗಿದೆ. ಕೀಟಗಳ ಮುತ್ತಿಗೆಯ ವಿರುದ್ಧ ಶಾಶ್ವತವಾದ ವಾರಂಟಿಯೊಂದನ್ನು ಅದು ಒಳಗೊಳ್ಳುತ್ತದೆ.
4. ಅಗ್ನಿ ಅವಘಡವೊಂದರ ಸಂದರ್ಭದಲ್ಲಿ ಅದರಿಂದ ಪಾರಾಗಲು ಸಾಕಷ್ಟು ಸಮಯವನ್ನು ಒದಗಿಸುತ್ತದೆ
ಜ್ವಾಲೆಗಳು ಫೈರ್-ರಿಟಾರ್ಡಂಟ್ ಪ್ಲೈವುಡ್‌ನ ಒಳಗೆ ತೂರಲು ಅಥವಾ ಅದರ ಮೂಲಕ ಹರಡಲು ಸಾಧ್ಯವಾಗುವುದಿಲ್ಲ. ಅದರ ಪರಿಣಾಮವಾಗಿ, ಬೆಂಕಿ ಅವಘಡದಲ್ಲಿ ಸಿಲುಕಿಕೊಂಡವರಿಗೆ ಪ್ಲೈವುಡ್ ಉರಿದು ಬೀಳುವ ಮೊದಲೇ ಅದರಿಂದ ಪಾರಾಗುವ ಸಮಯ ದೊರೆಯುತ್ತದೆ. ಹೆಚ್ಚುವರಿಯಾಗಿ, ಜನರು ಕಟ್ಟಡವನ್ನು ತೊರೆದು, ಬೆಂಕಿಯನ್ನು ನಿಗ್ರಹಿಸಲು ನೆರವಾಗುವಂತೆ ಸಾಕಷ್ಟು ಸಮಯವನ್ನು ಇದು ಒದಗಿಸುತ್ತದೆ.
5. ಕಡಿಮೆ ಹೊಗೆ
ಬಹುಪಾಲು ಜನರು ಸ್ವತಃ ಬೆಂಕಿಗಿಂತ ಹೊಗೆ ಹಾಗೂ ಅನಿಲಗಳಿಂದಾಗಿ ಉಸಿರುಗಟ್ಟುವಿಕೆಗೆ ಈಡಾಗುತ್ತಾರೆ. CO ಹಾಗೂ CO2 ಇವುಗಳ ಭಯಂಕರ ಸಂಯೋಜನೆಯು ಹೊಗೆಯಾಗಿ ಪರಿವರ್ತನೆಗೊಳ್ಳುತ್ತದೆ. ಅಗ್ನಿ-ಸಂಬಂಧಿತ ಮರಣ ಪ್ರಮಾಣಗಳಿಗೆ ಕೊಡುಗೆ ನೀಡುವ ಮುಖ್ಯ ಅಂಶವು ಹೊಗೆಯನ್ನು ಉಸಿರಾಡುವುದಾಗಿದೆ. ಹೊಗೆ ಮತ್ತು ವಿಷಕಾರಿ ರಸಾಯನಿಕಗಳಿಂದ ಸುಲಭವಾಗಿ ಉಸಿರುಗಟ್ಟುವಿಕೆ ಮತ್ತು ಕೊರಳು ಬಿಗಿಯುವಿಕೆ ಉಂಟಾಗಿ, ಆ ಸ್ಥಳವನ್ನು ಖಾಲಿ ಮಾಡುವ ಕಾರ್ಯವಿಧಾನಕ್ಕೆ ಅಡ್ಡಿಯಾಗುತ್ತದೆ. ಸೆಂಚುರಿಪ್ಲೈನ ಫೈರ್-ರಿಟಾರ್ಡಂಟ್ ಪ್ಲೈವುಡ್ ಹೊರಸೂಸುವಿಕೆಗಳನ್ನು ಕಡಿಮೆ ಮಾಡಲು ರಸಾಯನಿಕವಾಗಿ ಉಪಚರಿಸಲ್ಪಟ್ಟಿದೆ.
6. ಎಲ್ಲ ಆಧುನಿಕ ಕಟ್ಟಡಗಳಿಗೆ ಉಪಯುಕ್ತವಾಗಿದೆ
ಫೈರ್-ರಿಟಾರ್ಡಂಟ್ ಪ್ಲೈವುಡ್ ಅನ್ನು ವಸತಿ ಮತ್ತು ವಾಣಿಜ್ಯೋಪಯೋಗಿ ಸೇರಿದಂತೆ ಎಲ್ಲ ಕಟ್ಟಡಗಳಲ್ಲಿ ಬಳಸಬಹುದು. ಎಲ್ಲದಕ್ಕಿಂತ ಹೆಚ್ಚಾಗಿ, ಇದು ತಾಳಿಕೆ ಬರುತ್ತದೆ, ದೀರ್ಘಕಾಲ ಉಳಿಯುತ್ತದೆ ಹಾಗೂ ಎಲ್ಲ ಉದ್ದೇಶಗಳಿಗೆ ಒಂದು ಅತ್ಯುತ್ತಮವಾದ ಆಯ್ಕೆಯಾಗಿದೆ.
ತೀರ್ಮಾನ
ಅಗ್ನಿ-ಅನಾಹುತಗಳು ಎಲ್ಲಿಯಾದರೂ ಸಂಭವಿಸಬಹುದಾಗಿರುವುದರಿಂದ, ನಿಮ್ಮ ಮನೆ ಮತ್ತು ವ್ಯವಹಾರವನ್ನು ರಕ್ಷಿಸುವ ಪ್ರತಿಬಂಧಕ ಕ್ರಮಗಳನ್ನು ತೆಗೆದುಕೊಳ್ಳುವುದು ನಿರ್ಣಾಯಕವಾಗಿರುತ್ತದೆ. ಬೆಂಕಿಯನ್ನು ನಿರೋಧಿಸುವ ಪ್ಲೈವುಡ್ ಅಗ್ನಿ-ಅನಾಹುತದ ಅಪಾಯಗಳನ್ನು ಕಡಿಮೆ ಮಾಡುತ್ತದೆ ಹಾಗೂ ಬಹುಶಃ ಜೀವಗಳನ್ನೂ ಸಹ ಉಳಿಸುತ್ತದೆ. ನಿಮ್ಮ ಅಗತ್ಯತೆಗಳ ಮೇಲೆ ಅವಲಂಬಿತವಾಗಿ, ಒಳಾಂಗಣ ಮತ್ತು ಹೊರಾಂಗಣ ಎರಡೂ ಸಂದರ್ಭಗಳಲ್ಲಿ ನೀವದನ್ನು ಬಳಸಬಹುದು.
Add your comments