Consumer

ಸೈನಿಕ್ 710 – ನೀರಿನ ದಾಳಿಯಿಂದ ನಿಮ್ಮನ್ನು ರಕ್ಷಿಸುತ್ತದೆ

ನೀರು ಕಟ್ಟಿಗೆಯ ಶತ್ರುವಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ಒಂದು ಸಾಮಾನ್ಯ ಜ್ಞಾನವಾಗಿದೆ. ಕಟ್ಟಿಗೆ ಹಾಗೂ ಕಟ್ಟಿಗೆಯಿಂದ ಮಾಡಲ್ಪಟ್ಟ ಸಾಮಗ್ರಿಗಳಿಂದ ನೀರನ್ನು ದೂರ ಇರಿಸುವಂತೆ ನಮಗೆ ಯಾವಾಗಲೂ ಸಲಹೆ ನೀಡಲಾಗುತ್ತದೆ ಹಾಗೂ ಮುಂಜಾಗರೂಕತೆ ವಹಿಸುವಂತೆ ಎಚ್ಚರಿಸಲಾಗುತ್ತದೆ. ಕಟ್ಟಿಗೆಯು ಒಂದು ರಂಧ್ರಯುಕ್ತ ಪದಾರ್ಥವಾಗಿರುವುದರಿಂದ, ನೀರಿನ ಸಂಪರ್ಕಕ್ಕೆ ಅದು ಬರುವ ಪ್ರತಿ ಬಾರಿಯೂ, ನೀರು ಅದರೊಳಗೆ ಬಸಿದು, ಅದು ಕೊಳೆಯಲು, ಮೆತ್ತಗಾಗಲು ಹಾಗೂ ಒಳಗಿನಿಂದ ಹಾನಿಯುಂಟಾಗಲು
ಕಾರಣವಾಗುವಂತೆ ತೋರುತ್ತದೆ.
ಅದಕ್ಕಾಗಿಯೇ ಕಟ್ಟಿಗೆಯ ಸಾಮಗ್ರಿಗಳು ಮತ್ತು ಪೀಠೋಪಕರಣಗಳನ್ನು ಖರೀದಿಸಿ ತಂದ ನಂತರ ಸದಾ ಮುನ್ನೆಚ್ಚರಿಕೆಯನ್ನು ನಾವು ವಹಿಸಬೇಕಾಗುತ್ತದೆ. ಮನೆಯ ತುಂಬೆಲ್ಲ ವುಡನ್ ಕ್ಯಾಬಿನೆಟ್‌ಗಳು, ಟೇಬಲ್‌ಗಳು, ಕುರ್ಚಿಗಳು, ಮತ್ತು ಕಪಾಟುಗಳನ್ನು ನಾವು ಇರಿಸುವುದರಿಂದ, ನೀರಿನಿಂದಾಗಿ ಅವುಗಳು ಕೊಳೆಯುವಂತೆ ಬಿಡಲು ನಮಗೆ ಸಾಧ್ಯವಿರುವುದಿಲ್ಲ
ಆದರೆ ಘನ ಕಟ್ಟಿಗೆಯಲ್ಲದಂತೆಯೇ, ಪ್ಲೈವುಡ್‌ ಎಂಬುದು ನೀರಿಗೆ ಸಂಪೂರ್ಣವಾಗಿ ಅಲ್ಲದಿದ್ದರೂ ಅಷ್ಟೇನೂ ಈಡಾಗುವುದಿಲ್ಲ. ಹಲವಾರು ಕಾರಣಗಳಿಂದಾಗಿ ಘನ ಕಟ್ಟಿಗೆಯ ಬದಲಿಗೆ ಪ್ಲೈವುಡ್‌ಗೆ ಜನರು ಆದ್ಯತೆ ನೀಡುತ್ತಾರೆ. ತನ್ನ ನೀರು-ನಿರೋಧಕ ಪ್ರಕೃತಿಗೆ ಪ್ಲೈವುಡ್‌ ಹೆಸರಾಗಿರುವುದು ಈ ಕಾರಣಗಳಲ್ಲೊಂದು ಆಗಿದೆ. ಮನೆಯಲ್ಲಿ ಪ್ಲೈವುಡ್ ಹಾಗೂ ಪೀಠೋಪಕರಣಗಳನ್ನು ಇರಿಸಿಕೊಳ್ಳುವ ಮೂಲಕ, ನೀರಿನ ಸಂಪರ್ಕದ ಬಗ್ಗೆ ತಮ್ಮ ಚಿಂತೆಯನ್ನು ಜನರು ಕಡಿಮೆ ಮಾಡಿಕೊಳ್ಳಬಹುದು
ಆದರೆ ನೀರು-ನಿರೋಧಕತೆಯು ಕೆಲವೊಮ್ಮೆ ಸಾಕಾಗುವುದಿಲ್ಲ. ಈಗಿನ ದಿನಗಳಲ್ಲಿ ಒಂದೂ ದೂರು ಇಲ್ಲದೇ ಬಹುತೇಕ ಶಾಶ್ವತ ಕಾಲ ಬಾಳುವಂಥ, ನಿರ್ವಹಣೆ ಮಾಡುವಿಕೆ ಅಗತ್ಯವಾಗಿರದಂಥ, ಮಿತವ್ಯಯದ ಸಾಮಗ್ರಿಗಳಿಗಾಗಿ ಜನರು ನೋಡುತ್ತಾರೆ. ವರ್ಷಾಂತರಗಳಲ್ಲಿ ವಾಟರ್-ರೆಸಿಸ್ಟಂಟ್‌ ವುಡ್‌ ಬಗ್ಗೆ ತಾಳ್ಮೆಯನ್ನು ಕಳೆದುಕೊಂಡು, ವಾಟರ್‌ಪ್ರೂಫ್‌ ವಿಧವೊಂದಕ್ಕಾಗಿ ಜನರು ಹುಡುಕುತ್ತಾ ಇರುವುದು ಇದೇ ಕಾರಣಕ್ಕಾಗಿ
ವಾಟರ್‌ಪ್ರೂಫ್‌ ವುಡ್ ಎಂಬುದನ್ನು ಸೆಂಚುರಿಪ್ಲೈ ಸಾಧ್ಯವಾಗಿಸುವ ಮೊದಲು, ಅದು ಒಂದು ವಿಚಾರವಾಗಿ ಅಷ್ಟೇ ಉಳಿದಿತ್ತು. ಭಾರತದ ಅಲ್ಟಿಮೇಟ್‌ ವಾಟರ್‌ಪ್ರೂಫ್‌ ಪ್ಲೈವುಡ್‌ ಆದ ಸೈನಿಕ್ 710‌ ಅನ್ನು ಹೊರತರುವ ಮೊದಲು ಭಾರತದ ಅತ್ಯುತ್ತಮ ಪ್ಲೈವುಡ್‌ಗಳನ್ನು ಸೆಂಚುರಿಪ್ಲೈ ಅದಾಗಲೇ ಉತ್ಪಾದಿಸಿ ಆಗಿತ್ತು.
ಸೈನಿಕ್ 710 ‌ಎಂಬುದು ಭಾರತದ ಪ್ಲೈವುಡ್‌ ಎಂದು ಅಧೀಕೃತವಾಗಿ ಸುಪ್ರಸಿದ್ಧವಾಗಿದೆ. ದೇಶದಲ್ಲಿ ನೀವು ಎಲ್ಲಿಯೇ ಇರಿ, ಎಲ್ಲ ಕಡೆಗೂ ಒಂದೇ ಬೆಲೆ ಶ್ರೇಣಿಯನ್ನು ಸೈನಿಕ್ 710 ಹೊಂದಿದೆ. ಈ ಪ್ಲೈವುಡ್‌ ಕೇವಲ ವಾಟರ್‌ಪ್ರೂಫ್‌ ಮಾತ್ರವಲ್ಲ, ಗೆದ್ದಲು ನಿರೋಧಕವೂ ಆಗಿದೆ ಹಾಗೂ ಯಾವುದೇ ರೀತಿಯ ಬಾಗುವಿಕೆ ಅಥವಾ ಒಡೆಯುವಿಕೆಗೆ ತೀವ್ರವಾಗಿ ನಿರೋಧಕವಾಗಿದೆ. ಸಂಪೂರ್ಣ 8 ವರ್ಷಗಳ ವಾರಂಟಿಯನ್ನೂ ಸಹ ಇದು ಹೊಂದಿದೆ.
ಸೈನಿಕ್‌ 710 ಅನ್ನು ಬಳಸುವುದರಿಂದ ಓರ್ವ ವ್ಯಕ್ತಿಯು ಪಡೆದುಕೊಳ್ಳಬಹುದಾದ ಪ್ರಯೋಜನಗಳು ಹೀಗಿವೆ -

1. ಬಾಯ್ಲಿಂಗ್‌ ವಾಟರ್‌ಪ್ರೂಫ್

ಸೈನಿಕ್ 710 ಕೇವಲ ವಾಟರ್‌ಪ್ರೂಫ್‌ ಅಷ್ಟೇ ಅಲ್ಲ, ಬಾಯ್ಲಿಂಗ್‌ ವಾಟರ್‌ಪ್ರೂಫ್‌ ಸಹ ಆಗಿದೆ
ಸಂಸ್ಕರಿತ ಕಟ್ಟಿಗೆಗಳು ತಮ್ಮ ಉಷ್ಣ ಮತ್ತು ತೇವಾಂಶ ನಿರೋಧಕ ಗುಣಗಳಿಗೆ ಹೆಸರುವಾಸಿಯಾಗಿರುವುದಿಲ್ಲ. ಅದನ್ನು ಇರಿಸುವಷ್ಟು ಕಾಲವೂ, ಅದು ಉತ್ತಮವಾಗಿರುತ್ತದೆ. ಆದರೆ ಸೈನಿಕ್ 710 ಇತರ ಪ್ಲೈವುಡ್‌ಗಳಿಗಿಂತ ಭಿನ್ನವಾಗಿದೆ
ನೀರಿನಿಂದಷ್ಟೇ ಅಲ್ಲದೇ, ಕುದಿಯುವ ನೀರಿನಿಂದಲೂ ಸಹ ತನ್ನನ್ನು ತಾನು ಅದು ರಕ್ಷಿಸಿಕೊಳ್ಳುತ್ತದೆ. ಕುದಿಯುವ ನೀರಿನ ಸಂಪರ್ಕಕ್ಕೆ ಬಂದರೂ ಸಹ ‌ ಅದು ಒಡೆಯುವುದಿಲ್ಲ ಅಥವಾ ತಿರುಚಿಕೊಳ್ಳುವುದಿಲ್ಲ ಎಂಬುದಾಗಿ ಸೈನಿಕ್ 710 ಪರೀಕ್ಷಿಸಲ್ಪಟ್ಟಿದೆ ಹಾಗೂ ಸಮರ್ಥಿಸಲ್ಪಟ್ಟಿದೆ. ಇದು ನಿಮ್ಮ ಎಲ್ಲ ಕಟ್ಟಿಗೆ ಸಾಮಾನುಗಳನ್ನು ಸುರಕ್ಷಿತ ಹಾಗೂ ಸುಧೃಢವಾಗಿ ಇರಿಸುವ ಒಂದು ಶ್ರೇಷ್ಠವಾದ
ಇಂಜಿನೀಯರ್ಡ್‌ ವುಡ್‌ ಆಗಿದೆ.

2. ಸಾಮರ್ಥ್ಯ

ಮಾನಕ ಪ್ಲೈವುಡ್‌ಗಳು ಉಷ್ಣ, ಧೂಳು ಮತ್ತು ನೀರಿಗೆ ಒಡ್ಡಿಕೊಂಡ ನಂತರವೂ ಸಹ ಅನೇಕ ವರ್ಷಗಳವರೆಗೆ ಬಾಳಿಕೆ ಬರುತ್ತಿದ್ದವಾದರೂ, ಸೈನಿಕ್ 710 ದೊಂದಿಗೆ, ಈ ಭರವಸೆಯು ವಿಸ್ತಾರಗೊಂಡಿರುವುದರಲ್ಲಿ ಸಂದೇಹವೇ ಇಲ್ಲ. ಸೈನಿಕ್‌ 710 ದಿಂದ ಮಾಡಲ್ಪಟ್ಟ ಸರಕುಗಳು ಮತ್ತಿ ಪೀಠೋಪಕರಣಗಳು, ಒಂದೂ ಸಮಸ್ಯೆ ಇಲ್ಲದೇ, ವರ್ಷಾಂತರಗಳವರೆಗೆ ಸುಸ್ಥಿತಿಯಲ್ಲಿ ಇರುತ್ತಾ
ಬಂದಿವೆ. ನಿಮ್ಮ ಕಟ್ಟಿಗೆ ಸಾಮಗ್ರಿಗೆ ಅತ್ಯುತ್ತಮ ಫಿನಿಷ್‌ ಅನ್ನು ಹಾಗೂ ಅಷ್ಟೇ ಸಮನಾದ ದೀರ್ಘ ಬಾಳಿಕೆ ಮತ್ತು ಅಗಾಧ ಸಾಮರ್ಥ್ಯವನ್ನು ಅದು ನೀಡುತ್ತದೆ.
ನಂತರದ ಬಗ್ಗೆ ಚಿಂತಿಸದೇ ಅಡುಗೆಮನೆ ಮತ್ತು ಸ್ನಾನಗೃಹಗಳಲ್ಲಿ ಪ್ಲೈವುಡ್‌ ಕ್ಯಾಬಿನೆಟ್‌ಗಳು ಮತ್ತು ಡ್ರಾಯರ್‌ಗಳನ್ನು ಸುಲಭವಾಗಿ ನೀವು ಇನ್‌ಸ್ಟಾಲ್‌ ಮಾಡಬಹುದು. ಸೈನಿಕ್ 710‌ ಅನ್ನು ವಾಸ್ತವಿಕವಾದ ಮತ್ತು 100% ನಿಜವಾದ ವಾಟರ್‌ಪ್ರೂಫ್‌ ಎಂಬರ್ಥ ನೀಡುವ “ಅಸಲಿ ವಾಟರ್‌ಪ್ರೂಫ್‌” ಎಂದೂ ಸಹ ಕರೆಯಲಾಗುತ್ತದೆ. ಸೈನಿಕ್ 710 ಒಂದೇ ಒಂದು ಸೀಳು ಇಲ್ಲದೇ ಹಲವಾರು ವರ್ಷಗಳವರೆಗೆ
ನೀರನ್ನು ತಡೆದುಕೊಳ್ಳಬಲ್ಲದು. ಇದು 4, 6, 9, 12, 16, 19, & 25-ಎಮ್‌ಎಮ್‌ ಗಾತ್ರಗಳಲ್ಲಿ ದೊರೆಯುತ್ತದೆ

3. ಕೈಗೆಟುಕುವ ಬೆಲೆ -

ದೇಶದಲ್ಲಿಯೇ ಅತ್ಯಂತ ಹೆಚ್ಚು ಕೈಗೆಟುಕುವ ಬೆಲೆಯ ಹಾಗೂ ಉತ್ತಮ ಗುಣಮಟ್ಟದ ಪ್ಲೈವುಡ್‌ ಅನ್ನು ಸೆಂಚುರಿಪ್ಲೈ ಹೊಂದಿದೆ.‌ ಒಂದು ಪ್ಲೈವುಡ್‌ ಎಷ್ಟು ಕೈಗೆಟುಕುವಂತಿರಬಹುದು ಹಾಗೂ ತಾಳಿಕೆ ಬರುವಂತಿರಬಹುದು ಎಂಬುದಕ್ಕೆ ಸೈನಿಕ್ 710 ಮತ್ತೊಂದು ಉದಾಹರಣೆಯಾಗಿದೆ. ಕಟ್ಟಿಗೆ ಸಾಮಗ್ರಿಗೆ ನೀರು ಮತ್ತು ಯಾವುದೇ ರೀತಿಯ ತೇವಾಂಶದಿಂದ ಸೈನಿಕ್‌ 710 ನೀಡುವ ಎಲ್ಲ ಸಂರಕ್ಷಣೆಯೊಂದಿಗೆ ನಿಜವಾಗಿಯೂ ತುಂಬಾ ಕಡಿಮೆ ಬೆಲೆಯನ್ನು ಅದು ಹೊಂದಿದೆ. ಈ ಪ್ಲೈವುಡ್‌ ಅನ್ನು ದೇಶದಾದ್ಯಂತ ಒಂದೇ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತದೆ
ಮನಸ್ಸಿಗೆ ಮುದ ನೀಡುವ ವಿನ್ಯಾಸಗಳು ಹಾಗೂ ದೀರ್ಘ ಬಾಳಿಕೆಯ ಅಖಂಡ ಭರವಸೆಯೊಂದಿಗೆ ಇದು ಬರುತ್ತದೆ. ನಿಮ್ಮ ಮನೆಯನ್ನು ಮರುವಿನ್ಯಾಸಗೊಳಿಸಲು ಅಥವಾ ನವೀಕರಿಸಲು ನೀವು ಬಯಸಿದಲ್ಲಿಯೂ ಸಹ ಸೈನಿಕ್ 710 ಪರಿಪೂರ್ಣ ಆಯ್ಕೆಯಾಗಿದೆ
ಪ್ರತಿಯೊಂದನ್ನು ತಳಮಟ್ಟದಿಂದ ನಿರ್ಮಿಸಲು ಅಥವಾ ಮರುನಿರ್ಮಿಸಲು ಸೈನಿಕ್‌ 710 ನಿಮಗೆ ನೆರವಾಗುತ್ತದೆ. ಇದು ನಿಮ್ಮ ಮನೆಯನ್ನು ವಾಟರ್‌ಪ್ರೂಫ್ ಆಗಿಸುತ್ತದೆ ಹಾಗೂ ಗೆದ್ದಲುಗಳು ಮತ್ತು ಕೊರಕಗಳಿಂದಲೂ ಸಹ ರಕ್ಷಣೆಯನ್ನು ಒದಗಿಸುತ್ತದೆ. ನಿಮ್ಮ ಮನೆಯನ್ನು ಫರ್ನಿಶ್ಡ್‌ ಆಗಿ ಹಾಗೂ ಪಾಲಿಶ್ಡ್‌ ಆಗಿ ಕಾಣಿಸುವಂತೆ ಮಾಡುವುದಷ್ಟೇ ಅಲ್ಲದೇ ನಿಮ್ಮ ಮನೆಯನ್ನು ಸುರಕ್ಷಿತವಾಗಿ
ಹಾಗೂ ಒಳಗಿನಿಂದ ಆರೋಗ್ಯಪೂರ್ಣವಾಗಿಯೂ ಸಹ ಇರಿಸುತ್ತದೆ. ಸೈನಿಕ್ 710 – ವಾಟರ್‌ಪ್ರೂಫ್‌ ಪ್ಲೈವುಡ್‌ ಕೇವಲ ರೂ. 102/ಚದರ ಅಡಿ ಬೆಲೆಯಿಂದ ಪ್ರಾರಂಭವಾಗುತ್ತದೆ.
Leave a Comment

Loading categories...

Latest Blogs