ಫೈರ್ವಾಲ್ ತಂತ್ರಜ್ಞಾನ: ಮನೆಯಲ್ಲಿ ಅನಪೇಕ್ಷಿತ ಅಗ್ನಿ ಅನಾಹುತಗಳ ವಿರುದ್ಧದ ಸುರಕ್ಷತೆಗಾಗಿ ಕ್ರಾಂತಿಕಾರಿ ಪರಿವರ್ತಕ
ಮನಮೋಹಕವಾದ ಹಾಗೂ ಸಧೃಢವಾದ ಕಟ್ಟಿಗೆಯ ಪೀಠೋಪಕರಣಗಳೆಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ. ಆದರೆ ಯಾವುದೇ ಅಗ್ನಿ ಅವಘಡವೊಂದರ ಸಂದರ್ಭದಲ್ಲಿ ಬೆಂಕಿಯನ್ನು ಹರಡುವ ಮೂಲವಾಗಿ ಕಟ್ಟಿಗೆಯ ಪೀಠೋಪಕರಣಗಳು ವರ್ತಿಸುವುದು ಅವುಗಳ ಬಗ್ಗೆ ಇರುವ ಒಂದು ಸಾಮಾನ್ಯ ಕಳಕಳಿಯಾಗಿದೆ. ಹಾಗಾಗಿ, ನಿಮ್ಮ ನೆಚ್ಚಿನ ಪೀಠೋಪಕರಣವು ಪ್ಲೈವುಡ್‌ನಿಂದ ಮಾಡಲ್ಪಟ್ಟಿರುವಾಗ, ನಿಮ್ಮ ಈ ಭಯವು ನಿಮಗೆ ಅಡ್ಡಿಯಾಗದಿರಲಿ.
ಫೈರ್‌ವಾಲ್ ತಂತ್ರಜ್ಞಾನವನ್ನು ಹೊಂದಿರುವ ಈ ಶತಮಾನದ ಪ್ಲೈವುಡ್ ಆಗಿರುವ ಸೆಂಚುರಿಪ್ಲೈ ಪ್ಲೈವುಡ್ ಶೀಟ್‌ಗಳನ್ನು ನೀವು ಬಳಸಬಹುದು. ಯಾವುದೇ ಅನಪೇಕ್ಷಿತ ಅಗ್ನಿ ಅವಘಡದ ಸಂದರ್ಭದಲ್ಲಿ ನೀವು ಮತ್ತು ನಿಮ್ಮ ಕುಟುಂಬವು ಸುರಕ್ಷಿತರಾಗಿ ಇರುವುದನ್ನು ಈ ತಂತ್ರಜ್ಞಾನವು ಖಚಿತಪಡಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ಫೈರ್‌ವಾಲ್ ತಂತ್ರಜ್ಞಾನವು ಸೆಂಚುರಿಪ್ಲೈಗೆ ವಿಶಿಷ್ಟವಾಗಿದ್ದು, ಬೇರಾವುದೇ ಪ್ಲೈವುಡ್‌ನಲ್ಲಿ ಕಂಡುಬರುವುದಿಲ್ಲ.
ವಿಷಯ ಕೋಷ್ಟಕ
➔ ಫೈರ್‌ವಾಲ್ ತಂತ್ರಜ್ಞಾನ ಎಂದರೇನು?
➔ ಫೈರ್‌ವಾಲ್ ತಂತ್ರಜ್ಞಾನವು ಹೇಗೆ ನೆರವಾಗುತ್ತದೆ?
➔ ಸಂಕ್ಷಿಪ್ತವಾಗಿ
ಫೈರ್‌ವಾಲ್ ತಂತ್ರಜ್ಞಾನ ಎಂದರೇನು?
ಸೆಂಚುರಿಪ್ಲೈದಿಂದ ಸೃಷ್ಟಿಸಲ್ಪಟ್ಟಿರುವ ಫೈರ್ವಾಲ್ ತಂತ್ರಜ್ಞಾನವು ಬೆಂಕಿಯನ್ನು ಕುಂದಿಸುವ ತಂತ್ರಜ್ಞಾನವಾಗಿ ಅದರ ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಿದೆ. ಗಣನೀಯ ಸಂಖ್ಯೆಯ ಸೆಂಚುರಿಪ್ಲೈ ಪ್ಲೈವುಡ್ ಶೀಟ್‌ಗಳು ಫೈರ್‌ವಾಲ್ ತಂತ್ರಜ್ಞಾನದ ವೈಶಿಷ್ಟ್ಯತೆಯನ್ನು ಹೊಂದಿವೆ. ಮತ್ತು ಯಾವುದೇ ದುರದೃಷ್ಟಕರ ಘಟನೆಯೊಂದರಲ್ಲಿ ನಿಮಗೆ ಪ್ರಯೋಜನಕಾರಿಯಾಗಿ ಅವುಗಳು ಸಾಬೀತಾಗುವುದನ್ನು ವಿಶೇಷವಾಗಿ ಗಮನದಲ್ಲಿಟ್ಟುಕೊಂಡು ಅವುಗಳನ್ನು ಸೃಷ್ಟಿಸಲಾಗಿದೆ. ಆದರೆ ಅದು ಮಾಡುವುದಾದರೂ ಏನನ್ನು?
ಫೈರ್‌ವಾಲ್ ತಂತ್ರಜ್ಞಾನವು ಬೆಂಕಿಯು ಹರಡದಂತೆ ಅದನ್ನು ನಿಗ್ರಹಿಸುತ್ತದೆ ಹಾಗೂ ಬೆಂಕಿಯು ಹರಡುವ ಒಂದು ಮಾಧ್ಯಮವಾಗಿ ವರ್ತಿಸುವುದಿಲ್ಲ. ಸಾಮಾನ್ಯವಾಗಿ, ಕಟ್ಟಿಗೆಯೊಂದಿಗೆ ಬೆಂಕಿಯು ವೇಗವಾಗಿ ಪಸರಿಸುತ್ತದೆ, ಆದಾಗ್ಯೂ, ಫೈರ್‌ವಾಲ್ ತಂತ್ರಜ್ಞಾನವನ್ನು ಹೊಂದಿರುವ ಪ್ಲೈವುಡ್‌ಗಳೊಂದಿಗೆ ಅದು ಬೇರೆಯೇ ಆಗಿರುತ್ತದೆ. ಬೆಂಕಿಯು ಹರಡುವುದನ್ನು ಇದು ನಿಧಾನಿಸುವುದರಿಂದ, ನಿಮ್ಮ ಕುಟುಂಬದ ಸದಸ್ಯರನ್ನು ಸುರಕ್ಷಿತ ಸ್ಥಾನವೊಂದಕ್ಕೆ ಸಾಗಿಸಿ, ಅಗ್ನಿಶಾಮಕ ಪಡೆ, ಆ್ಯಂಬ್ಯುಲನ್ಸ್, ಮತ್ತು ನಿಮಗೆ ಅಗತ್ಯವಾಗಬಹುದಾದ ಬೇರಾವುದೇ ತುರ್ತು ಸ್ಪಂದಕರಿಗೆ ಕರೆ ಮಾಡಲು ಸಾಕಷ್ಟು ಸಮಯವು ನಿಮಗೆ ದೊರೆಯುತ್ತದೆ.
ಬೆಂಕಿಯ ಮೂಲವು ತೆಗೆದುಹಾಕಲ್ಪಟ್ಟ ನಂತರ ಪ್ಲೈವುಡ್‌ನೊಳಗಿನ ಫೈರ್‌ವಾಲ್ ತಂತ್ರಜ್ಞಾನವು ಬೆಂಕಿಯನ್ನು ಸ್ವಯಂ-ಶಮನಗೊಳಿಸಿಕೊಳ್ಳುತ್ತದೆ. ಅಷ್ಟರಲ್ಲೇ, ಕಡಿಮೆ ಹೊಗೆಯನ್ನು ಅದು ಉತ್ಪಾದಿಸಿ, ಉಸಿರುಗಟ್ಟುವಿಕೆಗೆ ನೀವು ಒಳಗಾಗದಂತೆ ನಿಮ್ಮನ್ನು ರಕ್ಷಿಸುತ್ತದೆ.
ಫೈರ್‌ವಾಲ್ ತಂತ್ರಜ್ಞಾನವು ಹೇಗೆ ನೆರವಾಗುತ್ತದೆ?
ವಿಧ್ವಂಸಕ ಘಟನೆಯೊಂದರ ಸಂದರ್ಭದಲ್ಲಿ ಫೈರ್‌ವಾಲ್ ತಂತ್ರಜ್ಞಾನವು ಅನೇಕ ರೀತಿಗಳಲ್ಲಿ ನೆರವಾಗುತ್ತದೆ. ಇತರ ಪ್ಲೈವುಡ್ ಶೀಟ್‌ಗಳಲ್ಲದಂತೆ, ಪ್ಲೈವುಡ್‌ನ ಮೇಲ್ಮೈ ಮೇಲೆ ಹೊತ್ತಿಕೊಂಡಿರಬಹುದಾದ ಬೆಂಕಿಯನ್ನು ಸ್ವಯಂ-ಶಮನಗೊಳಿಸಿಕೊಳ್ಳುವಲ್ಲಿ ಪಾತ್ರವನ್ನು ಇದು ವಹಿಸುತ್ತದೆ. ಆದರೆ ಇದು ಈ ತಂತ್ರಜ್ಞಾನವು ನಿಮಗೆ ನೆರವಾಗುವ ಒಂದು ರೀತಿ ಮಾತ್ರ ಆಗಿದೆ. ಅದು ಉಪಯುಕ್ತ ಎಂಬುದಾಗಿ ಸಾಬೀತಾಗುವ ಹಲವಾರು ರೀತಿಗಳು ಹೀಗಿವೆ:
● ಬೆಂಕಿಯು ನಿಧಾನವಾಗಿ ಒಳತೂರುವಿಕೆ
ಯಾವುದೇ ಅಗ್ನಿ ಅನಾಹುತವು ಉಲ್ಬಣಿಸಲು ಬೆಂಕಿಯ ಜ್ವಾಲೆಗಳು ಕ್ಷಿಪ್ರವಾಗಿ ಮತ್ತು ಸುಲಭವಾಗಿ ಒಳತೂರುವುದು ಅತ್ಯಂತ ಸಾಮಾನ್ಯ ಕಾರಣಗಳಲ್ಲಿ ಒಂದಾಗಿದೆ. ಫೈರ್‌ವಾಲ್ ತಂತ್ರಜ್ಞಾನವು ಬೆಂಕಿಯ ಹರಡುವಿಕೆಯನ್ನು ನಿಧಾನಿಸುವ ಶ್ರೇಷ್ಠವಾದ ಮಾರ್ಗವಾಗಿದೆ. ಫೈರ್ವಾಲ್ ತಂತ್ರಜ್ಞಾನವನ್ನು ಹೊಂದಿರುವ ಪ್ಲೈವುಡ್‌ನಲ್ಲಿ ಬೆಂಕಿಯು ಪ್ಲೈವುಡ್ ಶೀಟ್‌ನ ಒಳತೂರಲು ಸುಮಾರು 50 ನಿಮಿಷಗಳು ಬೇಕಾಗುತ್ತವೆ. ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಅಪಾಯದಿಂದ ಪಾರು ಮಾಡಿ ಸುರಕ್ಷಿತ ಸ್ಥಾನಕ್ಕೆ ಸೇರಿಸಲು ಹಾಗೂ ನಿಮಗೆ ಬೇಕಾಗುವ ಎಲ್ಲ ತುರ್ತು ಸಂಖ್ಯೆಗಳಿಗೆ ಕರೆ ಮಾಡಲು ಬೇಕಾಗುವ ಸ್ವಲ್ಪ ಹೆಚ್ಚುವರಿ ಸಮಯವನ್ನು ನಿಮಗೆ ಇದು ಒದಗಿಸುತ್ತದೆ.
ಆ ಅವಧಿಯಲ್ಲಿ, ಬೆಂಕಿಯನ್ನು ನಂದಿಸಿ, ಅದರ ಮೂಲವನ್ನೂ ಸಹ ನೀವು ತೆಗೆದುಹಾಕಬಹುದು, ಆಮೂಲಕ ಹೆಚ್ಚಿನ ಹಾನಿಯನ್ನು ತಪ್ಪಿಸಬಹುದು. ಕೆಲವು ಸಂದರ್ಭಗಳಲ್ಲಿ, ಬೆಂಕಿಯು ವೇಗವಾಗಿ ಹರಡುವುದರಿಂದ ಮನೆಗಳು ಹಾನಿಗೀಡಾಗುವ ಅವಕಾಶವು ಹೆಚ್ಚಾಗಿರುತ್ತದೆ. ಆದರೆ ಬೆಂಕಿಯು ಕ್ಷಿಪ್ರವಾಗಿ ಹರಡಲು ಬಿಡದ ಸಾಮಗ್ರಿಯೊಂದರಿಂದ ಪೀಠೋಪಕರಣಗಳನ್ನು ನೀವು ತಯಾರಿಸಿದಲ್ಲಿ, ನಿಮ್ಮ ಅಮೂಲ್ಯ ವಸ್ತುಗಳನ್ನು ಉಳಿಸಿಕೊಳ್ಳುವ ಉತ್ತಮ ಅವಕಾಶವನ್ನು ನೀವು ಹೊಂದಿರುತ್ತೀರಿ.
● ಕಡಿಮೆ ದಹನಶೀಲತೆ
ದಹನಶೀಲತೆ ಎಂದರೆ ಬೆಂಕಿ ಹೊತ್ತಿಕೊಳ್ಳಲು ಒಂದು ಪ್ಲೈವುಡ್ ತೆಗೆದುಕೊಳ್ಳುವ ಸಮಯವನ್ನು ಉಲ್ಲೇಖಿಸುತ್ತದೆ. ಒಂದು ಸಾಧಾರಣ ಪ್ಲೈವುಡ್ ಬೆಂಕಿ ಹೊತ್ತಿಕೊಂಡ ನಂತರ, ನಿಮ್ಮ ಮನೆಯಲ್ಲಿ ಆ ಪ್ಲೈವುಡ್‌ನ ಸುತ್ತಲೂ ಬೆಂಕಿ ಹೊತ್ತಿಕೊಳ್ಳುವ ಸರಣಿಯೊಂದನ್ನೂ ಸಹ ಪ್ರಾರಂಭಿಸಬಹುದು. ಫೈರ್‌ವಾಲ್ ತಂತ್ರಜ್ಞಾನವನ್ನು ಹೊಂದಿರುವ ಪ್ಲೈವುಡ್ ಒಂದರ ಮೇಲ್ಮೈ ಮೇಲೆ ಜ್ವಾಲೆಗಳು ಹರಡಲು ಅಂದಾಜು 35 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಎಂಬುದು ಕಠಿಣ ಪರೀಕ್ಷೆಗಳ ನಂತರ ಸೆಂಚುರಿಪ್ಲೈದಿಂದ ಅನ್ವೇಷಿಸಲ್ಪಟ್ಟಿದೆ. ತುಲನಾತ್ಮಕವಾಗಿ, ಸಾಮಾನ್ಯ ಪ್ಲೈವುಡ್‌ಗಳು ಇನ್ನೂ ವೇಗವಾಗಿ ಹೊತ್ತಿಕೊಂಡು ಬೆಂಕಿಯನ್ನು ಪಸರಿಸುತ್ತವೆ. ನಿಮ್ಮ ಮತ್ತು ನಿಮ್ಮ ಕುಟುಂಬದ ರಕ್ಷಣೆಗಾಗಿ ಬೆಂಕಿಯನ್ನು ಕುಂದಿಸುವ ವಿಷಯಕ್ಕೆ ಬಂದಾಗ ಫೈರ್‌ವಾಲ್ ತಂತ್ರಜ್ಞಾನವು ಬಹಳಷ್ಟು ಪರಿಣಾಮಕಾರಿಯಾಗಿದೆ ಎಂದು ಇದು ಅರ್ಥೈಸುತ್ತದೆ.
ಎಲ್ಲದಕ್ಕಿಂತ ಹೆಚ್ಚಾಗಿ, ಬೆಂಕಿಯ ಮೂಲವನ್ನು ನೀವು ತೆಗೆದುಹಾಕಿದಾಗ, ನಿಮ್ಮ ಪ್ಲೈವುಡ್‌ನಲ್ಲಿರುವ ಫೈರ್‌ವಾಲ್ ತಂತ್ರಜ್ಞಾನವು ಬೆಂಕಿಯನ್ನು ತಾನೇ ಶಮನಗೊಳಿಸಿಕೊಳ್ಳುತ್ತದೆ. ನಿಮ್ಮ ಕುಟುಂಬ ಹಾಗೂ ಸಾಮಾನುಗಳೊಂದಿಗೆ ಆ ಸ್ಥಳದಿಂದ ಸುರಕ್ಷಿತವಾಗಿ ನಿರ್ಗಮಿಸಲು ಹೆಚ್ಚು ಸಮಯವನ್ನು ನಿಮಗೆ ನೀಡಲು ಕಡಿಮೆ ದಹನಶೀಲತೆಯು ನೆರವಾಗುತ್ತದೆ.
● ಚಕ್ಕೆ ಏಳುವುದಿಲ್ಲ
ಯಾವುದೇ ಅಗ್ನಿ ಅನಾಹುತದ ಸಂದರ್ಭದಲ್ಲಿ, ಬೆಂಕಿಯನ್ನು ನಂದಿಸಲು ನೀವು ಪ್ರಯತ್ನಿಸಿದಲ್ಲಿ ಹಾಗೂ ನೀರನ್ನು ಎರಚುವಿಕೆಯಿಂದ ಪ್ಲೈವುಡ್ ಹಾಳಾಗುತ್ತದೆ ಎಂಬ ಕಳಕಳಿಯನ್ನು ಹೊಂದಿದ್ದಲ್ಲಿ, ಚಿಂತಿಸಲೇಬೇಡಿ! ಫೈರ್‌ವಾಲ್ ತಂತ್ರಜ್ಞಾನವನ್ನು ಹೊಂದಿರುವ ಯಾವುದೇ ಪ್ಲೈವುಡ್ ವಾತಾವರಣದಿಂದ ನೀರನ್ನು ಹೀರಿಕೊಳ್ಳುವುದಿಲ್ಲ, ನೀರಿನಿಂದ ಪ್ಲೈವುಡ್ ಅನ್ನು ನೀವು ತೊಯ್ಯಿಸಿದರೂ ಸಹ. ನೀರನ್ನು ಅದು ಹೀರಿಕೊಳ್ಳದಿರುವುದರಿಂದ, ನೀರಿನಿಂದಾಗಿ ಚಕ್ಕೆ ಏಳುವ ಅಥವಾ ಹಾನಿಗೀಡಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.
ಬೆಂಕಿಯು ನಂದಿಸಲ್ಪಟ್ಟ ನಂತರ, ಪ್ಲೈವುಡ್‌ನಿಂದ ನಿರ್ಮಿಸಲ್ಪಟ್ಟಿರುವ ಪೀಠೋಪಕರಣವು ಅದರ ಮೇಲ್ಮೈಗೆ ಉಂಟಾದ ಯಾವುದೇ ಹಾನಿಯಿಂದ ಸುರಕ್ಷಿತವಾಗಿರುತ್ತದೆ ಹಾಗೂ ತನ್ನ ಭೌತಿಕ ಬಲವನ್ನು ವರ್ಷಾನುಗಟ್ಟಲೇ ಕಾಯ್ದುಕೊಳ್ಳುತ್ತದೆ.
● ಹೊಗೆಯ ಉತ್ಪಾದನೆ ಕಡಿಮೆ
ಬೆಂಕಿಯು ಹೊತ್ತಿಕೊಂಡಾಗ, ಉಸಿರಾಡಿದವರಿಗೆ ಅಪಾಯವನ್ನುಂಟು ಮಾಡುವಂಥ ವಿಷಕಾರಿ ಅನಿಲಗಳು ಬಿಡುಗಡೆಯಾಗುವುದರ ಜೊತೆಯಲ್ಲಿ ಬಹಳಷ್ಟು ಹೊಗೆಯು ಉತ್ಪತ್ತಿಯಾಗುವ ಅವಕಾಶವು ಅಧಿಕವಾಗಿರುತ್ತದೆ. ಇಂಥ ಒಂದು ಸಂದರ್ಭಕ್ಕೆ, ಕೆಲವು ರಸಾಯನಿಕಗಳನ್ನು ಬಳಸಿಕೊಳ್ಳುವ ಫೈರ್‌ವಾಲ್ ತಂತ್ರಜ್ಞಾನವನ್ನು ಹೊಂದಿರುವ ಸೆಂಚುರಿಪ್ಲೈ ಪ್ಲೈವುಡ್ ಬೇರಾವುದೇ ಸಾಮಾನ್ಯ ಪ್ಲೈವುಡ್ ಉತ್ಪಾದಿಸುವುದಕ್ಕಿಂತ ಕಡಿಮೆ ಹೊಗೆಯು ಉತ್ಪಾದಿಸಲ್ಪಡುವುದನ್ನು ಖಚಿತಪಡಿಸುತ್ತದೆ.
ಸಂಕ್ಷಿಪ್ತವಾಗಿ
ಪ್ಲೈವುಡ್ ಶೀಟ್‌ಗಳಲ್ಲಿ ಫೈರ್‌ವಾಲ್ ತಂತ್ರಜ್ಞಾನದ ಉಪಯುಕ್ತತೆಯು ಗಣನೀಯವಾಗಿದೆ. ಮತ್ತು ಸಮಯ ಕಳೆದಂತೆ ಇದು ಸವಕಳಿಯಾಗುವುದಿಲ್ಲ. ಪೀಠೋಪಕರಣವು ಅಗ್ನಿ ಅವಘಡವೊಂದಕ್ಕೆ ಅದಾಗಲೇ ಈಡಾಗಿದ್ದರೂ ಸಹ, ಸಂಪೂರ್ಣವಾಗಿ ಅದು ಹಾನಿಗೊಂಡಿಲ್ಲದಿದ್ದಲ್ಲಿ, ಅದರ ಮೇಲ್ಮೈ ಒಳತೂರಲ್ಪಡದಿರುವಷ್ಟು ಕಾಲ ಫೈರ್‌ವಾಲ್ ತಂತ್ರಜ್ಞಾನವು ಭವಿಷ್ಯದಲ್ಲಿ ಕೆಲಸ ಮಾಡುತ್ತದೆ. ಯಾವುದೇ ದುರದೃಷ್ಟಕರ ಘಟನೆಯನ್ನು ಮುಂದಾಗಿ ನೀವು ಊಹಿಸಲು ಸಾಧ್ಯವಿಲ್ಲದಿರುವ ಪ್ರಪಂಚವೊಂದರಲ್ಲಿ, ಫೈರ್‌ವಾಲ್ ತಂತ್ರಜ್ಞಾನವು ಅಗತ್ಯತೆಯ ಸಮಯದಲ್ಲಿ ಓರ್ವ ರಕ್ಷಕನಾಗಿ ನೆರವಾಗುತ್ತದೆ.
Add your comments