ಸೆಂಚುರಿಪ್ಲೈನ ಅಸಲಿ: ಫೈರ್‌ವಾಲ್‌ ತಂತ್ರಜ್ಞಾನ
Centuryply Blog

Interested in
knowing more?

ಸೆಂಚುರಿಪ್ಲೈನ ಅಸಲಿ: ಫೈರ್‌ವಾಲ್‌ ತಂತ್ರಜ್ಞಾನ

ಬೆಂಕಿ ಎಂಬುದು ಬೆಳಕು ಮತ್ತು ಶಾಖವನ್ನು ಸಾಗಿಸಲು ಮಾನವಕುಲವನ್ನು ಸಶಕ್ತಗೊಳಿಸಿರುವಂಥ ಒಂದು ಪ್ರಮುಖವಾದ ನೈಸರ್ಗಿಕ ಬಲವಾಗಿದೆ. ಕೃಷಿ, ಲೋಹದ ಕೆಲಸ, ಸಿರಾಮಿಕ್‌ಗಳು, ಗಾರೆ ಕೆಲಸ ಇವುಗಳ ವಿಕಸನಕ್ಕೂ ಸಹ, ಹಾಗೂ ಪ್ರಾಚೀನ ಜನರ ಮುಂಚಿನ ವಿದ್ಯುತ್‌ ಸ್ಥಾವರಗಳ ನಿಯಂತ್ರಣಕ್ಕೂ ಸಹ ಅದು ನಮ್ಮನ್ನು ಅನುಮತಿಸಿದೆ. ಮಾನವನ ಬದುಕುಳಿಯುವಿಕೆಗೆ ಬೆಂಕಿಯು ಅವಶ್ಯವಾಗಿದೆ, ಆದಾಗ್ಯೂ ಜೀವ ಹಾಗೂ ಸ್ವತ್ತುಗಳ ವಿನಾಶಕಾರಿ ನಷ್ಟವನ್ನೂ ಸಹ ಅದು ಉಂಟುಮಾಡಬಹುದು.

ಬೆಂಕಿಯ ಅಪಾಯಗಳಿಂದ ನಿಮ್ಮ ಮನೆ ಮತ್ತು ಕುಟುಂಬವನ್ನು ರಕ್ಷಿಸುವುದು ನಿಮ್ಮ ಅಗ್ರಣೀಯ ಆದ್ಯತೆಯಾಗಿರಬೇಕು. ಆದಕ್ಕಾಗಿಯೇ ಪ್ಲೈವುಡ್‌ನೊಳಗೆ ಹಾಸುಹೊಕ್ಕಾಗಿಸಿರುವ ಹೊಸ ಫೈರ್‌ವಾಲ್‌ ತಂತ್ರಜ್ಞಾನವನ್ನು ಸೆಂಚುರಿಪ್ಲೈ ಹೊರತಂದಿದೆ. ಅನಿರೀಕ್ಷಿತ ಅಗ್ನಿ ಅನಾಹುತಗಳಿಂದ ನಿಮ್ಮ ಮನೆಯನ್ನು ರಕ್ಷಿಸಲು ವಿನ್ಯಾಸಗೊಳಿಸಲ್ಪಟ್ಟಿರುವ ಅತ್ಯುತ್ತಮ ಪ್ಲೈವುಡ್‌ಗಳಲ್ಲಿ ಇದು ಒಂದಾಗಿದೆ. ಫೈರ್‌ವಾಲ್‌ ತಂತ್ರಜ್ಞಾನದೊಂದಿಗೆ ನಿರ್ಮಿಸಲ್ಪಟ್ಟಿರುವ ಈ ಪ್ಲೈವುಡ್‌ ಬೆಂಕಿಯು ವೇಗವಾಗಿ ಹರಡುವುದನ್ನು ತಡೆಗಟ್ಟುವುದಾಗಿ ಸಾಬೀತುಪಡಿಸಲ್ಪಟ್ಟಿದ್ದು, ರಕ್ಷಣಾ ಕಾರ್ಯಾಚರಣೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅನುಕೂಲ ಮಾಡಿಕೊಡುತ್ತದೆ.

ವಿಷಯ ಕೋಷ್ಟಕ

➔ ಸೆಂಚುರಿಪ್ಲೈನ ಫೈರ್‌ವಾಲ್‌ ತಂತ್ರಜ್ಞಾನ ಎಂದರೇನು?

➔ ವೈಶಿಷ್ಟ್ಯತೆಗಳು

     ◆ ಕನಿಷ್ಟ ದಹನಶೀಲತೆ

     ◆ ಬೆಂಕಿಯು ನಿಧಾನವಾಗಿ ಒಳತೂರುವಿಕೆ

     ◆ ಕಡಿಮೆ ಹೊಗೆ ಉತ್ಪತ್ತಿ

     ◆ ಶಿಥಿಲಗೊಳ್ಳುವುದಿಲ್ಲ

➔ ಫೈರ್‌ವಾಲ್‌ ತಂತ್ರಜ್ಞಾನವನ್ನು ಹೊಂದಿರುವ ಸೆಂಚುರಿಪ್ಲೈ ಪ್ಲೈವುಡ್‌ ನಿಮ್ಮನ್ನು ರಕ್ಷಿಸುವ ಆದರ್ಶಪ್ರಾಯ ಆಯ್ಕೆ ಏಕೆ ಆಗಿದೆ?

➔ ತೀರ್ಮಾನ


ಸೆಂಚುರಿಪ್ಲೈನ ಫೈರ್‌ವಾಲ್‌ ತಂತ್ರಜ್ಞಾನ ಎಂದರೇನು?

ಸೆಂಚುರಿಪ್ಲೈನ ಫೈರ್ವಾಲ್ ತಂತ್ರಜ್ಞಾನವು ಅಗ್ನಿ ಅನಾಹುತದ ಅಪಾಯಗಳಿಗಾಗಿ ವಿಶಿಷ್ಟ ಸೌಲಭ್ಯದ ಒಂದು ಸ್ಪಂದನೆಯಾಗಿದೆ. ನ್ಯಾನೊ-ಇಂಜಿನೀಯರ್ಡ್ಎಲೆಮೆಂಟ್ಗಳಿಂದ ಸಂತೃಪ್ತಗೊಳಿಸುವ ಮೂಲಕ, ದಹನಶೀಲತೆಯನ್ನು ಕಡಿಮೆ ಮಾಡಿ, ಹಾನಿಯನ್ನು ಕನಿಷ್ಟ ಮಟ್ಟದಲ್ಲಿರಿಸುವ ಫೈರ್‌ವಾಲ್‌ ತಂತ್ರಜ್ಞಾನವನ್ನು ಹೊಂದಿರುವ ಪ್ಲೈವುಡ್‌ಗಳನ್ನು ಸೆಂಚುರಿಪ್ಲೈ ವಿನ್ಯಾಸಗೊಳಿಸಿದೆ. ನಿಮ್ಮ ಸ್ವತ್ತು ಹಾಗೂ ಪೀಠೋಪಕರಣವನ್ನು ಅಗ್ನಿ ಅನಾಹುತದ ನಷ್ಟದಿಂದ ರಕ್ಷಿಸಲು ಈ ಫೈರ್ವಾಲ್ ತಂತ್ರಜ್ಞಾನವು ಅನುಮತಿಸುತ್ತದೆ ಹಾಗೂ ಜೀವಗಳನ್ನು ರಕ್ಷಿಸಲು ನೆರವಾಗುತ್ತದೆ.


ಬೆಂಕಿ ಹೊತ್ತಿಕೊಳ್ಳುವ ಸಹಜಗುಣವನ್ನು ಸಾಮಾನ್ಯ ಪ್ಲೈವುಡ್‌ ನೈಸರ್ಗಿಕವಾಗಿ ಹೊಂದಿರುತ್ತದೆ. ಅಧಿಕ ತಾಪಮಾನಕ್ಕೆ ಒಡ್ಡಿದಲ್ಲಿ ಉರಿದುಹೋಗುವ ಸಾಮಾನ್ಯ ಪ್ಲೈವುಡ್‌ಗಳಿಗಿಂತ ಈ ಪ್ಲೈವುಡ್‌ಗಳು ಹೆಚ್ಚು ಶಾಖ ಮತ್ತು ಜ್ವಾಲೆ ನಿರೋಧಕವಾಗಿರುತ್ತವೆ. ಉರಿಯುವಿಕೆ ಮತ್ತು ಕರಕಲಾಗುವಿಕೆಯನ್ನು ತಡೆದುಕೊಳ್ಳುವಂತೆ ಈ ಪ್ಲೈವುಡ್‌ಗಳನ್ನು ಜಾಗರೂಕತೆಯಿಂದ ಸಿದ್ಧಪಡಿಸಲಾಗಿರುತ್ತದೆ. ಆಮೂಲಕ, ಅಡುಗೆಮನೆಗಳು ಮತ್ತು ಅಗ್ನಿ ಅನಾಹುತದ ಸಂಭಾವ್ಯತೆಯ ಇತರ ಸ್ಥಳಗಳಲ್ಲಿ ಬಳಸಲು ಪರಿಪೂರ್ಣ ಉತ್ಪನ್ನವನ್ನಾಗಿಸಲಾಗುತ್ತದೆ.

ವೈಶಿಷ್ಟ್ಯತೆಗಳು​​​​​​​

ಅಗ್ನಿ ಅನಾಹುತ ಮತ್ತು ಅದಕ್ಕೆ ಸಂಬಂಧಿಸಿದ, ಜನರು ಮತ್ತು ಸ್ವತ್ತಿನ ವಿನಾಶದ ಅಪಾಯವನ್ನು ಕಡಿಮೆ ಮಾಡಲು ಹಲವಾರು ವರ್ಷಗಳ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯತ್ನಗಳ ನಂತರ ಫೈರ್ವಾಲ್ ತಂತ್ರಜ್ಞಾನವನ್ನು ಒಳಗೊಂಡಿರುವ ಪ್ಲೈವುಡ್‌ಗಳನ್ನು ಸೆಂಚುರಿಪ್ಲೈ ಸೃಷ್ಟಿಸಿದೆ. ಜ್ವಾಲೆಗಳನ್ನು ನಂದಿಸುವುದಕ್ಕಾಗಿ ಮನೆಗಳಲ್ಲಿ ಬಳಸಲು ಸೂಕ್ತವಾದ ಅತ್ಯುತ್ತಮ ಗುಣಮಟ್ಟದ ಅನೇಕ ಗುಣಲಕ್ಷಣಗಳನ್ನು ಅದು ಹೊಂದಿದ್ದು, ಶ್ರೇಷ್ಠವಾದ ಪ್ಲೈವುಡ್‌ ಆಗಿದೆ.​​​​​​​

1. ಕನಿಷ್ಟ ದಹನಶೀಲತೆ

ದಹನಶೀಲತೆ ಎಂದರೆ ತಾನು ಬೆಂಕಿ ಹೊತ್ತಿಕೊಂಡು, ತನ್ನ ಸಮೀಪದಲ್ಲಿ ಬೆಂಕಿಯ ಪ್ರತಿಕ್ರಿಯೆಗಳ ಸರಣಿಯನ್ನು ಆರಂಭಿಸಲು ಪ್ಲೈವುಡ್‌ನ ತುಂಡೊಂದು ತೆಗೆದುಕೊಳ್ಳುವ ಸಂಪೂರ್ಣ ಅವಧಿ ಎಂದು ವ್ಯಾಖ್ಯಾನಿಸಬಹುದು. ವ್ಯಾಪಕವಾಗಿ ಪರೀಕ್ಷಿಸಿದ ನಂತರ, ಫೈರ್‌ವಾಲ್‌ ಅನ್ನು ಹೊಂದಿರುವ ಪ್ಲೈವುಡ್‌ ಮೇಲೆ ಬೆಂಕಿಯು ಮೇಲ್ಮೈ ಸುತ್ತಲೂ ವ್ಯಾಪಿಸಲು 35 ನಿಮಿಷಗಳನ್ನು ತೆಗೆದುಕೊಳ್ಳುವುದನ್ನು ಸಂಶೋಧಕರು ಕಂಡುಕೊಂಡರು. ಸಾಂಪ್ರದಾಯಿಕ ಪ್ಲೈವುಡ್‌ಗಳಿಗಿಂತ ಈ ಅವಧಿಯು ತುಂಬಾ ಕಡಿಮೆ ಆಗಿದ್ದು, ಫೈರ್‌ವಾಲ್‌ನ ಬೆಂಕಿ-ಕುಂದಿಸುವ ಗುಣಲಕ್ಷಣಗಳು ಕಾರ್ಯಕ್ಷಮತೆಯುಕ್ತವಾಗಿರುವುದನ್ನು ಸಾಬೀತುಪಡಿಸುತ್ತದೆ.​​​​​​​

2. ಬೆಂಕಿಯು ನಿಧಾನವಾಗಿ ಒಳತೂರುವಿಕೆ

ಜ್ವಾಲೆಗಳು ದತ್ತ ಸಂರಚನೆಯೊಂದನ್ನು ಒಳತೂರುವ ಸರಾಗತೆ ಮತ್ತು ವೇಗ, ಇದು ಬೆಂಕಿಯು ಕ್ಷಿಪ್ರವಾಗಿ ಹಾಗೂ ತೀವ್ರವಾಗಿ ಪಸರಿಸಲು ಪ್ರಮುಖ ಕಾರಣಗಳಲ್ಲೊಂದು ಆಗಿದೆ. ಪ್ಲೈವುಡ್‌ ಶೀಟ್‌ ಒಂದನ್ನು ಸುಡಲು ಜ್ವಾಲೆಗಳಿಗೆ ಸುಮಾರು 50 ನಿಮಿಷಗಳು ಬೇಕಾಗುವ ಮಟ್ಟಕ್ಕೆ ಬೆಂಕಿಯು ವ್ಯಾಪಿಸುವ ಗತಿಯನ್ನು ಫೈರ್‌ವಾಲ್‌ ತಂತ್ರಜ್ಞಾನವು ನಿಧಾನಿಸಿ, ಜನರು ರಕ್ಷಿಸಲ್ಪಟ್ಟು, ಆ ಜಾಗವನ್ನು ಖಾಲಿ ಮಾಡಲು ಬೇಕಾಗುವಷ್ಟು ಸಮಯವನ್ನು ನೀಡುತ್ತದೆ.

3. ಕಡಿಮೆ ಹೊಗೆ ಉತ್ಪಾದನೆ

ಬೆಂಕಿಯು ಹೊತ್ತಿಕೊಂಡಿರುವ ಸಂದರ್ಭದಲ್ಲಿ, ಅನೇಕ ಅಪಾಯಕಾರಿ ರಸಾಯನಿಕಗಳು ಮತ್ತು ಹೊಗೆ ಉತ್ಪತ್ತಿಯಾಗುತ್ತದೆ, ಜನರಿಗೆ ಇದು ತುಂಬಾ ಅಪಾಯಕಾರಿಯಾಗಿರುತ್ತದೆ. ಈ ಕಾರಣಕ್ಕಾಗಿ, ಫೈರ್ವಾಲ್ ತಂತ್ರಜ್ಞಾನವನ್ನು ಹೊಂದಿರುವ ಸೆಂಚುರಿಪ್ಲೈ ಪ್ಲೈವುಡ್ ಸಾಮಾನ್ಯ ಪ್ಲೈವುಡ್‌ಗಿಂತ ಕನಿಷ್ಟ ಹೊಗೆ-ಉತ್ಪತ್ತಿ ಮಾಡುವ ರಸಾಯನಿಕಗಳನ್ನು ಒಳಗೊಂಡಿದೆ.​​​​​​​

4. ಶಿಥಿಲಗೊಳ್ಳುವುದಿಲ್ಲ

ಫೈರ್ವಾಲ್ ತಂತ್ರಜ್ಞಾನದಿಂದ ರಕ್ಷಿಸಲ್ಪಟ್ಟಿರುವ ಪ್ಲೈವುಡ್‌, ವಾತಾವರಣದ ತೇವಾಂಶಕ್ಕೆ ಪ್ರತಿರೋಧಕವಾಗಿದ್ದು,
ನಿರ್ಮಿಸಲ್ಪಟ್ಟಿರುವ ಪೀಠೋಪಕರಣಕ್ಕೆ ನೀರನ್ನು ಸೇರಿಸಿದರೂ ಸಹ ಅದು ಶಿಥಿಲಗೊಳ್ಳುವುದಿಲ್ಲ ಅಥವಾ ಹಾನಿಗೀಡಾಗುವುದಿಲ್ಲ. ನಿಮ್ಮ ಪೀಠೋಪಕರಣಕ್ಕೆ ಯಾವುದೇ ಹಾನಿಯು ಉಂಟಾಗುವುದಿಲ್ಲ ಹಾಗೂ ಬೆಂಕಿಯು ನಂದಿಸಲ್ಪಟ್ಟ ನಂತರ ಅದರ ರಚನಾತ್ಮಕ ಸಮಗ್ರತೆಯು ಕಾಯ್ದುಕೊಳ್ಳಲ್ಪಡುತ್ತದೆ.

ಫೈರ್‌ವಾಲ್‌ ತಂತ್ರಜ್ಞಾನವನ್ನು ಹೊಂದಿರುವ ಸೆಂಚುರಿಪ್ಲೈನ ಪ್ಲೈವುಡ್‌ ನಿಮ್ಮನ್ನು ರಕ್ಷಿಸುವ ಆದರ್ಶಪ್ರಾಯ ಆಯ್ಕೆ ಏಕೆ ಆಗಿದೆ?

1. IS 5509 ಪ್ರಮಾಣೀಕರಣವನ್ನು ಹೊಂದಿರುವ ಏಕಮಾತ್ರ ನೈಜ ಪ್ಲೈವುಡ್

ಬೆಂಕಿ ನಿರೋಧಕ ಉತ್ಪನ್ನಗಳನ್ನು ಒದಗಿಸುವ ದಾವೆಯನ್ನು ಅನೇಕ ಕಂಪನಿಗಳು ಮಾಡುತ್ತವೆಯಾದರೂ, ಪ್ರಸ್ತುತದಲ್ಲಿ ಫೈರ್‌ವಾಲ್‌ ಮಾತ್ರ ISO 5509 ದಿಂದ ಪ್ರಮಾಣೀಕರಿಸಲ್ಪಟ್ಟಿದೆ.​​​​​​​

2. ASTM E84 ಮಾನಕದ ಅನುಸರಣೆಯನ್ನು ಮಾಡುತ್ತದೆ

ಫೈರ್‌ವಾಲ್‌ ತಂತ್ರಜ್ಞಾನವನ್ನು ಹೊಂದಿರುವ ಈ ಪ್ಲೈವುಡ್‌ ಭಾರತೀಯ ವಿನಿಯಮಗಳನ್ನಷ್ಟೇ ಅಲ್ಲದೇ, ಇನ್ನೂ ಹೆಚ್ಚು ಕಠಿಣವಾದ ಅಂತರಾಷ್ಟ್ರೀಯ ಮಾನಕ ASTM E84 ಅನ್ನೂ ಸಹ ಅನುಸರಣೆ ಮಾಡುತ್ತದೆ.​​​​​​​

ನ್ಯಾನೊ-ಇಂಜಿನೀಯರ್ಡ್‌ ಎಲೆಮೆಂಟ್‌ಗಳನ್ನು ಒಳಗೊಂಡಿದೆ

ನಿರ್ದಿಷ್ಟವಾಗಿ ಸೂತ್ರೀಕರಿಸಲ್ಪಟ್ಟಿರುವ ನ್ಯಾನೊ-ಇಂಜಿನೀಯರ್ಡ್‌ ಕಣಗಳನ್ನು ಈ ಪ್ಲೈವುಡ್‌ಗಳು ಹೊಂದಿದ್ದು, ಹೊತ್ತಿಕೊಳ್ಳುವಿಕೆ ಅಥವಾ ಜ್ವಾಲೆ ಒಳತೂರುವಿಕೆಯನ್ನು ತಡೆಗಟ್ಟಿ, ಬೆಂಕಿ-ನಿರೋಧಕ ಗುಣಗಳನ್ನು ತರಲು ಈ ಕಣಗಳು ನೆರವಾಗುತ್ತವೆ, ಹಾಗೂ ಬೆಂಕಿ-ನಿರೋಧಕತೆಗೆ ಇದನ್ನು ಒಂದು ಅತ್ಯುತ್ತಮ ಆಯ್ಕೆಯನ್ನಾಗಿಸುತ್ತವೆ.

3. ಕಡಿಮೆ ಹೊಗೆ ಮತ್ತು ಕಡಿಮೆ ವಿಷಕಾರಿ ಅನಿಲ ಹೊರಹೊಮ್ಮುವಿಕೆ

ಸುಧಾರಿತ ಬೆಂಕಿ-ನಿರೋಧಕ ರಸಾಯನಿಕಗಳ ಒಂದು ವಿಶೇಷ ಮಿಶ್ರಣದೊಂದಿಗೆ ಈ ಪ್ಲೈವುಡ್‌ಗಳನ್ನು ಉಪಚರಿಸಲಾಗಿರುತ್ತದೆ. ಹೀಗೆ, ಅಗ್ನಿ ಅನಾಹುತವೊಂದರ ಸಂದರ್ಭದಲ್ಲಿ ಹೊಗೆ ಹಾಗೂ ವಿಷಕಾರಿ ಅನಿಲ ಕಣಗಳು ಕಡಿಮೆ ಪ್ರಮಾಣದಲ್ಲಿ ಉತ್ಪತ್ತಿಯಾಗುವುದನ್ನು, ಹಾಗೂ ಉಸಿರುಗಟ್ಟುವಿಕೆ ಮತ್ತು ಪ್ರಜ್ಞೆ ತಪ್ಪುವಿಕೆಯ ಅಪಾಯವನ್ನು ಕಡಿಮೆ ಮಾಡುವುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ.​​​​​​​

4. ಬೆಂಕಿ ಒಳತೂರುವಿಕೆಯ ಕಡಿಮೆ ದರ

ಆದರ್ಶಪ್ರಾಯ ಪರೀಕ್ಷಾ ಮಾನದಂಡಗಳಡಿಯಲ್ಲಿ ಆಂತರಿಕವಾಗಿ ಉರಿಯಲು ಫೈರ್ವಾಲ್ ತಂತ್ರಜ್ಞಾನವನ್ನು ಹೊಂದಿರುವ 19 ಮಿಮೀ ಶೀಟ್‌ ಪ್ಲೈವುಡ್ 50 ಕ್ಕೂ ಹೆಚ್ಚು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಉರಿಯುವ ಸಾಮಾನ್ಯ ದರವು 30 ನಿಮಿಷಗಳಾಗಿದೆ. ಅಗ್ನಿ ಅನಾಹುತವೊಂದರ ಸಂದರ್ಭದಲ್ಲಿ, ಜನರನ್ನು ರಕ್ಷಿಸಲು ಮತ್ತು ಅಮೂಲ್ಯ ವಸ್ತುಗಳು ಹಾಗೂ ದಾಖಲೆಗಳನ್ನು ಉಳಿಸಿಕೊಳ್ಳಲು, ಎರಡಕ್ಕೂ ಇದು ನೆರವಾಗುತ್ತದೆ.​​​​​​​

5. ತೇವಾಂಶವನ್ನು ಹೀರಿಕೊಳ್ಳದ ರೀತಿಯಲ್ಲಿ ನಿರ್ಮಾಣ

ಫೈರ್‌ವಾಲ್‌ ತಂತ್ರಜ್ಞಾನವನ್ನು ಒಳಗೊಂಡಿರುವ ಪ್ಲೈವುಡ್‌ ತೇವಾಂಶವನ್ನು ಹೀರಿಕೊಳ್ಳದ ಒಂದು ಸಾಮಗ್ರಿಯಾಗಿದೆ, ಅಂದರೆ ರಸಾಯನಿಕ ಪದಾರ್ಥಗಳ ತೇವಾಂಶ ಆಕರ್ಷಣೆಯಿಂದಾಗಿ ತುಕ್ಕು ಹಿಡಿಯುವಿಕೆಗೆ ಈಡಾಗುವ ಹಾರ್ಡ್‌ವೇರ್‌ ಭಾಗಗಳನ್ನು ಅದು ಹಾನಿಗೊಳಿಸುವುದಿಲ್ಲ.​​​​​​​

6. ರಕ್ಷಿಸಲ್ಪಟ್ಟಿರುವ ಸಂರಚನಾತ್ಮಕ ಸಮಗ್ರತೆ

ನ್ಯಾನೊ-ಇಂಜಿನೀಯರ್ಡ್‌ ಸಂಸ್ಕರಣೆಗೆ ಹೆಚ್ಚುವರಿಯಾಗಿ, ಬಳಸಲಾಗಿರುವ ಸಾಮಗ್ರಿಗಳು ಮತ್ತು ಅಂಟುಪದಾರ್ಥಗಳ ನೈಸರ್ಗಿಕ ಸ್ಥಿತಿಸ್ಥಾಪಕತ್ವವು ಜ್ವಾಲೆಗಳ ಉಪಸ್ಥಿತಿಯಲ್ಲಿಯೂ ಸಹ ಪ್ಲೈವುಡ್‌ನ ಸಂರಚನಾತ್ಮಕ ಸಮಗ್ರತೆಯು ರಕ್ಷಿಸಲ್ಪಡುವುದನ್ನು ಖಚಿತಪಡಿಸುತ್ತದೆ.​​​​​​​

7. ವಿಸ್ತೃತ ವಾರಂಟಿ

ಕೊರಕ ಹಾಗೂ ಗೆದ್ದಲುಗಳ ಮುತ್ತಿಗೆಯ ವಿರುದ್ಧ ಎರಡು ದಶಕಗಳಿಗೂ ಹೆಚ್ಚಿನ ವಾರಂಟಿಯೊಂದನ್ನು ಈ ಪ್ಲೈವುಡ್‌ ಒಳಗೊಂಡಿದೆ.​​​​​​​

ತೀರ್ಮಾನ​​​​​​​

ಯಾವ ಮನೆಯೂ ಸಂಪೂರ್ಣವಾಗಿ ಬೆಂಕಿ-ನಿರೋಧಕವಾಗಿಲ್ಲದಿರುವಾಗಲೂ, ಕೆಲವು ಸರಳವಾದ ಕ್ರಮಗಳನ್ನು ಅನುಸರಿಸುವ ಮೂಲಕ ನಿಮ್ಮ ಮನೆಯ ಭದ್ರತೆಯನ್ನು ಬಹಳಷ್ಟು ಮಟ್ಟಿಗೆ ನೀವು ಹೆಚ್ಚಿಸಬಹುದು. ನಿಮ್ಮ ಮನೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಸುರಕ್ಷಿತವಾಗಿಸಲು ಶ್ರೇಷ್ಠವಾದ, ಬೆಂಕಿ-, ಕೀಟ- ಹಾಗೂ ಕೊಳೆಯುವಿಕೆ-ನಿರೋಧಕ ಸಾಮಗ್ರಿಗಳನ್ನು ಬಳಸಿ. ದುಬಾರಿಯಲ್ಲದ ಹಾಗೂ ಈ ಎಲ್ಲ ಅಗತ್ಯತೆಗಳನ್ನು ಪೂರೈಸುವ ಫೈರ್ವಾಲ್ ತಂತ್ರಜ್ಞಾನವನ್ನು ಹೊಂದಿರುವ ಸೆಂಚುರಿಪ್ಲೈನ ಈ ಶತಮಾನದ ಪ್ಲೈವುಡ್‌ ಒಂದು ಅತ್ಯುತ್ತಮವಾದ ಆಯ್ಕೆಯಾಗಿರುತ್ತದೆ.


Enquire Now

Add your comments

Voice Search

Speak Now

Voice Search
Web Speech API Demonstration

Click on the microphone icon and begin speaking.

Speak now.

No speech was detected. You may need to adjust your microphone settings.

Click the "Allow" button above to enable your microphone.

Permission to use microphone was denied.

Permission to use microphone is blocked. To change, go to chrome://settings/contentExceptions#media-stream

Web Speech API is not supported by this browser. Upgrade to Chrome version 25 or later.

Press Control-C to copy text.
(Command-C on Mac.)
Text sent to default email application.
(See chrome://settings/handlers to change.)