ಸುಂದರವಾದ ಹಾಗೂ ಸೊಬಗಿನಿಂದ ಕೂಡಿದ ಸ್ಥಳಾವಕಾಶವೊಂದನ್ನು ನೀವು ನಿರ್ಮಿಸಬಯಸಿದಲ್ಲಿ, ದೀರ್ಘಕಾಲದ ಬಾಳಿಕೆಯೊಂದಿಗೆ ಕ್ರಿಯಾತ್ಮಕತೆಯನ್ನು ಸಂಯೋಜಿಸಿ, ಸೆಂಚುರಿಪ್ಲೈನ ಕಸ್ಟಮೈಜೇಬಲ್ ಪ್ಲೈವುಡ್ ಅನ್ನು ಬಳಸುವಂತೆ ನಾವು ಶಿಫಾರಸ್ಸು ಮಾಡುತ್ತೇವೆ. ನಿಗದಿತವಾಗಿ ನೀರಿನ ಸಂಪರ್ಕಕ್ಕೆ ಬರುವ, ಬಾಥ್‌ರೂಮ್ ಕ್ಯಾಬಿನೆಟ್‌ಗಳು ಅಥವಾ ಕಿಚನ್ ಕೌಂಟರ್‌ಗಳಂಥ ಪೀಠೋಪಕರಣವನ್ನು ತಯಾರಿಸುವಾಗ ವಾಟರ್‌ಪ್ರೂಫ್ ಪ್ಲೈವುಡ್ ಬೇಕಾಗುತ್ತದೆ. ಅವುಗಳನ್ನು ಸ್ವಚ್ಛಗೊಳಿಸಿ, ನಿರ್ವಹಣೆ ಮಾಡುವುದನ್ನು ಗಣನೀಯವಾಗಿ ಹೆಚ್ಚು ಸುಲಭ ಹಾಗೂ ಸರಳವಾಗಿಸಲಾಗುತ್ತದೆ.
ನಿಮ್ಮ ಮನೆಗೆ ಸಮೃದ್ಧವಾದ, ಐಷಾರಾಮಿ-ನೋಟದ ಕ್ಯಾಬಿನೆಟ್‌ಗಳು, ಕೌಂಟರ್‌ಟಾಪ್‌ಗಳು ಮತ್ತು ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ನಿರ್ಮಿಸಿ, ಅದನ್ನು ಒಂದು ನೈಜವಾದ ಹಾಗೂ ಆಕರ್ಷಣೀಯವಾದ ಲಿವಿಂಗ್ ಏರಿಯಾ ಆಗಿ ಪರಿವರ್ತಿಸುವುದನ್ನು ಸೆಂಚುರಿಪ್ಲೈ ಸೈನಿಕ್ 710 ವಾಟರ್‌ಪ್ರೂಫ್ ಪ್ಲೈವುಡ್ ಸುಲಭಗೊಳಿಸುತ್ತದೆ.
ವಿಷಯ ಕೋಷ್ಟಕ
➔ ವಾಟರ್‌ಪ್ರೂಫ್ ಪ್ಲೈವುಡ್ ಅನ್ನು ನೀವು ಏಕೆ ಆಯ್ಕೆ ಮಾಡಿಕೊಳ್ಳಬೇಕು?
➔ ವಾಟರ್‌ಪ್ರೂಫ್ ಪ್ಲೈವುಡ್‌ನ ವೈಶಿಷ್ಟ್ಯತೆಗಳು
◆ ಬಾಯ್ಲಿಂಗ್ ವಾಟರ್‌ಪ್ರೂಫ್ ಗ್ರೇಡ್ ಪ್ಲೈವುಡ್ (bwp ದರ್ಜೆಯ ಪ್ಲೈವುಡ್)
◆ ಕೊರಕ ಮತ್ತು ಗೆದ್ದಲು ನಿರೋಧಕ
◆ ಬಾಗುವಿಕೆ ನಿರೋಧಕ
◆ ಎಲ್ಲ ಹವಾಮಾನ ಪರಿಸ್ಥಿತಿಗಳಿಗೆ ಉನ್ನತ ನಿರೋಧಕತೆ
➔ ವಾಟರ್‌ಪ್ರೂಫ್ ಪ್ಲೈವುಡ್ ಅನ್ನು ಎಲ್ಲಿ ಬಳಸಬೇಕು?
➔ ಸೈನಿಕ್ 710 – ನಿಜವಾದ ವಾಟರ್‌ಪ್ರೂಫ್ ಪ್ಲೈವುಡ್ (bwp ದರ್ಜೆಯ ಪ್ಲೈವುಡ್)
ದೇಶದಾದ್ಯಂತದ ಜನರಿಗೆ ಸೆಂಚುರಿಪ್ಲೈ ಪ್ಲೈವುಡ್ ಒಂದು ಅತ್ಯಂತ ಕೈಗೆಟುಕುವ ಬೆಲೆಯ ಆಯ್ಕೆಯಾಗಿದೆ. ಒಂದು ಯೂನಿಟ್ ಎಂದರೆ ಅಂದಾಜು 929 ಚ.ಸೆಂಮೀ.ಗಳಾಗಿರುವಲ್ಲಿ, ಸೈನಿಕ್ 710 ಪ್ಲೈವುಡ್‌ನ ಬೆಲೆಯು ಪ್ರತಿ ಯೂನಿಟ್ಟಿಗೆ ರೂ.105 ಗಳಾಗಿದೆ (GST ಒಳಗೊಂಡು). ಸೈನಿಕ್ 710 ಪ್ಲೈವುಡ್ ಜಲ-ನಿರೋಧಕ, ಬಾಳಿಕೆಯುಕ್ತ, ಹಾಗೂ ದೀರ್ಘಕಾಲ ಉಳಿಯುವ ಪ್ಲೈವುಡ್ ಆಯ್ಕೆ ಆಗಿರುವುದರಿಂದ ಪ್ರತಿಯೊಂದು ಆಧುನಿಕ ಮನೆಗೆ ಅದು ಅಗತ್ಯವಾಗಿರುತ್ತದೆ.
ವಾಟರ್‌ಪ್ರೂಫ್ ಪ್ಲೈವುಡ್‌ನ ವೈಶಿಷ್ಟ್ಯತೆಗಳು
ಸೆಂಚುರಿಪ್ಲೈ ಸೈನಿಕ್ 710 ಪ್ಲೈವುಡ್‌ನ ಕೆಲವು ವೈಶಿಷ್ಟ್ಯತೆಗಳನ್ನು ಇಲ್ಲಿ ನೀಡಲಾಗಿದೆ.
ಸೈನಿಕ್ 710 ಒಂದು ಬಾಯ್ಲಿಂಗ್ ವಾಟರ್‌ಪ್ರೂಫ್ (BWP) ಗ್ರೇಡ್ ಪ್ಲೈವುಡ್ ಮತ್ತು ಬ್ಲಾಕ್‌ಬೋರ್ಡ್ ಆಗಿದೆ. ಬಾಯ್ಲಿಂಗ್ ವಾಟರ್‌ಪ್ರೂಫ್ ಪ್ಲೈವುಡ್ ಅತ್ಯಂತ ಹೆಚ್ಚು ಜಲ-ನಿರೋಧಕತೆಯನ್ನು ಒದಗಿಸುತ್ತದೆ. ಈ ಪ್ಲೈವುಡ್ ತೀವ್ರ ಹವಾಮಾನ ನಿರೋಧಕವಾಗಿದ್ದು, ತನ್ನ ಬಲ ಮತ್ತು ಸಾಮರ್ಥ್ಯವನ್ನು ಕಳೆದುಕೊಳ್ಳದೇ, ಬದಲಾಗುವ ಹವಾಮಾನ ಪ್ರವೃತ್ತಿಗಳಿಗೆ ಒಡ್ಡಲ್ಪಡಬಹುದಾಗಿದೆ.
ಈ ವಿಧದ ಪ್ಲೈವುಡ್ ನೀರಿನಿಂದ ಹಾನಿಗೀಡಾಗುವುದಿಲ್ಲ ಹಾಗೂ ತುಂಬಾ ನುಣುಪಾದ ಫಿನಿಶ್ ಅನ್ನು ಹೊಂದಿದ್ದು, ಕಿಚನ್, ಬಾಥ್‌ರೂಮ್‌ಗಳು ಮತ್ತು ಇತರ ಪ್ರದೇಶಗಳಿಗೆ ಪರಿಪೂರ್ಣವಾಗಿರುತ್ತದೆ.
ಸೈನಿಕ್ 710 ಪ್ಲೈವುಡ್ ರಸಾಯನಿಕವಾಗಿ ಉಪಚರಿಸಲ್ಪಟ್ಟಿದ್ದು, ಅದನ್ನು ಕೊರಕ ಮತ್ತು ಗೆದ್ದಲು ನಿರೋಧಕವನ್ನಾಗಿಸಲು ಗ್ಲ್ಯೂ ಲೈನ್ ಪ್ರೊಟೆಕ್ಷನ್ ಅನ್ನು ಹೊಂದಿದೆ. ಕಳಪೆ-ಗುಣಮಟ್ಟದ ಪ್ಲೈವುಡ್‌ನಲ್ಲಿ ಗೆದ್ದಲಿನ ಸಮಸ್ಯೆಯು ಮರುಕಳಿಸುವ ಒಂದು ಸಮಸ್ಯೆ ಆಗಿರುತ್ತದೆ. ಎಲ್ಲ ಸೆಂಚುರಿಪ್ಲೈ ಪ್ಲೈವುಡ್‌ಗಳು ಗೆದ್ದಲು ನಿರೋಧಕವಾಗಿದ್ದು, ಒಳಾಂಗಣ ಮತ್ತು ಹೊರಾಂಗಣ ಅನ್ವಕತೆಗಳಿಗೆ ಸೂಕ್ತವಾಗಿವೆ.
ಎಂಟು-ವರ್ಷಗಳ ವಾರಂಟಿಯನ್ನೂ ಸಹ ಸೈನಿಕ್ 710 ಹೊಂದಿದ್ದು, ಇನ್ನೂ ಹೆಚ್ಚು ಕಾಲ ಬಾಳುತ್ತದೆ.
ಸೈನಿಕ್ 710 ಪ್ಲೈವುಡ್ ಅನ್ನು ಆ ಶ್ರೇಣಿಯಲ್ಲಿ ಲಭ್ಯವಿರುವ ಅತ್ಯುತ್ತಮ ಪ್ಲೈವುಡ್ ಅನ್ನಾಗಿಸುವ ಒಂದು ವೈಶಿಷ್ಟ್ಯತೆಯು ಬಾಗುವಿಕೆಯನ್ನು ನಿರೋಧಿಸುವ ಅದರ ಸಾಮರ್ಥ್ಯವಾಗಿದೆ. ಪ್ಲೈವುಡ್ ಬಾಗುವಿಕೆಯು ಅತ್ಯಂತ ಪ್ರಚಲಿತವಾದ ಸಮಸ್ಯೆಗಳಲ್ಲಿ ಒಂದಾಗಿದೆ. ಅದರ ಸರಿಸಾಟಿ ಇಲ್ಲದ ಬಲ ಹಾಗೂ ತಿರುಚುವಿಕೆ ಮತ್ತು ಬಾಗುವಿಕೆ ನಿರೋಧಕತೆಯಿಂದಾಗಿ ಪೀಠೋಪಕರಣದ ಮೂಲ ವಿನ್ಯಾಸವನ್ನು ವರ್ಷಾನುಗಟ್ಟಲೇ ಕಾಯ್ದುಕೊಳ್ಳುವುದನ್ನು ಸೈನಿಕ್ 710 ಸಶಕ್ತಗೊಳಿಸುತ್ತದೆ. ಕ್ಲಿಷ್ಟಕರ ಹವಾಮಾನ ಪರಿಸ್ಥಿತಿಗಳಲ್ಲಿಯೂ ಸಹ ಈ ವಾಟರ್‌ಪ್ರೂಫ್ ಪ್ಲೈವುಡ್ ತನ್ನ ಸಮಗ್ರತೆಯನ್ನು ಉಳಿಸಿಕೊಳ್ಳುತ್ತದೆ.
ಸೈನಿಕ್ 710 ಪ್ಲೈವುಡ್ ಹೆಚ್ಚು ಬಲಕ್ಕಾಗಿ ಹೆಚ್ಚು ಪ್ಲೈಗಳನ್ನು ಹೊಂದಿದ್ದು, ಎಲ್ಲ ತೀವ್ರ ಹವಾಮಾನ ಪರಿಸ್ಥಿತಿಗಳಿಗೆ ಉನ್ನತ ನಿರೋಧಕತೆಯನ್ನು ಹೊಂದಿದೆ. ಇದು ಅದನ್ನು ಬಾಳಿಕೆಯುಕ್ತವಾಗಿಸುತ್ತದೆ, ಹಾಗೂ ತನ್ನ ಬಲವನ್ನು ದೀರ್ಘ ಸಮಯದವರೆಗೆ ಈ ಪ್ಲೈವುಡ್ ಉಳಿಸಿಕೊಳ್ಳುತ್ತದೆ. ಈ ಪ್ಲೈವುಡ್ ಶೀಟ್‌ಗಳನ್ನು ತಯಾರಿಸಲು ಬಳಸಲಾಗುವ ಸಾರಗುಂದಿಸದ ರೆಜಿನ್‌ಗಳು, ಅಢೆಜಿವ್‌ಗಳು, ಮತ್ತು ಉತ್ಕೃಷ್ಟವಾದ ಕಚ್ಚಾ ಸಾಮಗ್ರಿಗಳು ಸೈನಿಕ್ 710 ದ ಬಲದ ಮುಖ್ಯ ಮೂಲವಾಗಿವೆ.
ಕಲ್ಪಿಸಿಕೊಳ್ಳಬಹುದಾದ ಎಲ್ಲ ಪೀಠೋಪಕರಣಗಳು ಹಾಗೂ ಬಾಥ್‌ರೂಮ್‌ಗಳು ಮತ್ತು ಕಿಚನ್‌ಗಳು ಸೇರಿದಂತೆ ಒಳಾಂಗಣ ವಿನ್ಯಾಸದ ಅಗತ್ಯತೆಗಳಿಗೆ ವಾಟರ್‌ಪ್ರೂಫ್ ಆಗಿರುವ ಸೆಂಚುರಿಪ್ಲೈ ಪ್ಲೈವುಡ್ ಪರಿಪೂರ್ಣವಾಗಿದೆ.
ಕೌಂಟರ್‌ಟಾಪ್‌ಗಳು, ಡೈನಿಂಗ್ ಟೇಬಲ್‌ಗಳು, ವಾಕ್-ಇನ್ ಕ್ಲೊಜೆಟ್ ಡಿಜೈನ್‌ಗಳಂಥ ಹಲವಾರು ಒಳಾಂಗಣ ಅನ್ವಕತೆಗಳಿಗೆ ವಾಟರ್‌ಪ್ರೂಫ್ ಪ್ಲೈವುಡ್ ಅತ್ಯಂತ ಪ್ರಯೋಜನಕಾರಿಯಾಗಿದೆ. ಉನ್ನತ ಗುಣಮಟ್ಟದ ಪ್ಲೈವುಡ್ ಅನ್ನು ಬಳಸಿಕೊಂಡು ಹಲವಾರು ಶೈಲಿಗಳನ್ನು ನೀವು ಸೃಷ್ಟಿಸಬಹುದು ಹಾಗೂ ಒಟ್ಟಾರೆ ವಿನ್ಯಾಸದೊಂದಿಗೆ ನಿಮ್ಮ ನಿರ್ದಿಷ್ಟ ಅಗತ್ಯತೆಗಳನ್ನು ಮೇಳೈಸಬಹುದು.
ಮಾರುಕಟ್ಟೆಯಲ್ಲಿ ಮಾರಾಟ ಮಾಡಲ್ಪಡುವ ಅನೇಕ ಸ್ಥಳೀಯ ಪ್ಲೈವುಡ್ ಉತ್ಪನ್ನಗಳು ವಾಟರ್‌ಪ್ರೂಫ್ ಆಗಿರುವ ದಾವೆಯನ್ನು ಮಾಡುತ್ತವಾದರೂ, ಅವುಗಳು ಆ ರೀತಿ ಕಾಣಿಸಲು ಸಾಮಾನ್ಯವಾಗಿ ಡಿಪ್ ಮಾಡಿದ ಪ್ಲೈವುಡ್ ಆಗಿರುತ್ತವೆ. ಇಂಥ ಪ್ಲೈವುಡ್‌ನ ಅತ್ಯಂತ ನಿರ್ಣಾಯಕವಾದ ವೈಶಿಷ್ಟ್ಯತೆಯು 72 ಗಂಟೆಗಳ ಕಾಲ ಕುದಿಯುವ ನೀರನ್ನು ತಾಳಿಕೊಳ್ಳುವುದಾಗಿದ್ದು, ಸ್ಥಳೀಯ ಪ್ಲೈವುಡ್ ಉತ್ಪನ್ನಗಳಲ್ಲಿ ಕಂಡುಬರುವುದಿಲ್ಲ. ಅಗತ್ಯ ಪ್ರಯೋಗಾಲಯ ಪರಿಸ್ಥಿತಿಗಳಡಿಯಲ್ಲಿ 72 ಗಂಟೆಗಳ ಕುದಿಯುವ ನೀರಿನ ಪರೀಕ್ಷೆಯನ್ನು ಸೈನಿಕ್ 710 ಪ್ಲೈವುಡ್ ಯಶಸ್ವಿಯಾಗಿ ಜಯಿಸಿದೆ.
ಇತರ ಪ್ರತಿಯೊಂದು ಸೆಂಚುರಿಪ್ಲೈ ಉತ್ಪನ್ನದಂತೆ, ಈ ಪ್ಲೈವುಡ್ ಸಹ ಬಾಗುವಿಕೆ-ನಿರೋಧಕವಾಗಿದ್ದು, ಕೊರಕ ಮತ್ತು ಗೆದ್ದಲು ನಿರೋಧಕ ಗುಣಗಳಿಗಾಗಿ ರಸಾಯನಿಕವಾಗಿ ಉಪಚರಿಸಲ್ಪಟ್ಟಿದೆ. ಹೆಚ್ಚಿನ ಬಲಕ್ಕಾಗಿ ಹೆಚ್ಚು ಸಂಖ್ಯೆಯ ಪ್ಲೈಗಳನ್ನು ಇದು ಹೊಂದಿದ್ದು, ಎಲ್ಲ ಹವಾಮಾನ ಪರಿಸ್ಥಿತಿಗಳಿಗೆ ಅತ್ಯಂತ ನಿರೋಧಕವಾಗಿದೆ.
ಮತ್ತೇನಿದೆ?
ಮಳಿಗೆಯೊಂದರಿಂದ ನೀವು ಕೊಳ್ಳುವ ಪ್ಲೈವುಡ್‌ನ ನೈಜತೆಯ ಬಗ್ಗೆ ನೀವು ಚಿಂತಿಸಲೇಬೇಕಿಲ್ಲ. ನಕಲಿ ಪ್ಲೈವುಡ್‌ನಿಂದ ರಕ್ಷಿಸುವುದಕ್ಕಾಗಿ ಸೆಂಚುರಿಪ್ರಾಮಿಸ್ ಆ್ಯಪ್ ಅನ್ನು ಸೆಂಚುರಿಪ್ಲೈ ನಿಮಗಾಗಿ ತರುತ್ತದೆ. ಈ ಆ್ಯಪ್ ಅನ್ನು ನೀವು ಡೌನ್‌ಲೋಡ್ ಮಾಡಿಕೊಂಡು, ಪ್ಲೈವುಡ್ ಮೇಲಿರುವ QR ಅನ್ನು ಸ್ಕ್ಯಾನ್ ಮಾಡಿ, ಅದರ ನೈಜತೆಯ ಬಗ್ಗೆ ಭರವಸೆಯನ್ನು ತಳೆಯಬಹುದು.
ಸೆಂಚುರಿಪ್ಲೈ ಸೈನಿಕ್ 710 ವಾಟರ್‌ಪ್ರೂಫ್ ಪ್ಲೈವುಡ್ ಇದು ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಂತ ಕೈಗೆಟುಕುವ ಹಾಗೂ ಜನಪ್ರಿಯವಾದ ಪ್ಲೈವುಡ್ ಆಯ್ಕೆಯಾಗಿದೆ. ನಿಮ್ಮ ಕನಸಿನ ಮನೆ ಅಥವಾ ಒಳಾಂಗಣ ಪೀಠೋಪಕರಣವನ್ನು ನಿರ್ಮಿಸಲು ಸೈನಿಕ್ 710 ದಂಥ ದೀರ್ಘ ಕಾಲ ಬಾಳುವ ಹಾಗೂ ಸಧೃಢವಾದ ಪ್ಲೈವುಡ್ ಅನ್ನು ಒಳಾಂಗಣ ಮತ್ತು ಹೊರಾಂಗಣದಲ್ಲಿ ನೀವು ಬಳಸಬಹುದು. ಬ್ಲಾಕ್‌ಬೋರ್ಡ್ ರೂಪದಲ್ಲಿಯೂ ಸಹ ಇದು ಲಭ್ಯವಿದೆ.
ತಲೆತಲಾಂತರದವರೆಗೆ ಉಳಿಯುವ ಹಾಗೂ ಎಲ್ಲ ಹವಾಮಾನ ಪರಿಸ್ಥಿತಿಗಳಲ್ಲಿಯೂ ಗಟ್ಟಿಮುಟ್ಟಾಗಿ, ಹೊಳೆಯುತ್ತಾ ಇರುವ ಸೆಂಚುರಿಪ್ಲೈ ಪ್ಲೈವುಡ್ ಅನ್ನು ಬಳಸಿಕೊಂಡು ನಿಮ್ಮ ಕನಸಿನ ಮನೆಯನ್ನು ನೀವು ನಿರ್ಮಿಸಿಕೊಳ್ಳಬಹುದು.
Loading categories...